ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಉನ್ನತೀಕರಣ ಅಭಿವೃದ್ಧಿ ಕಾಮಗಾರಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ 20 ಲಕ್ಷ ರೂ. ಅನುದಾನ ಮಂಜೂರಾತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಚಾರ್ಮಾಡಿ ಗ್ರಾಮದ ಪ್ರಮುಖರು ಇತ್ತೀಚೆಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಮಿತಾ ಪೂಜಾರಿ, ಪ್ರಮುಖರಾದ ಯಶೋಧರ ಚಾರ್ಮಾಡಿ, ಜಾರ್ಜ್ ಎಂ.ವಿ ಚಿಬಿದ್ರೆ, ಸಂಶುದ್ದೀನ್ ಚಾರ್ಮಾಡಿ, ನಿತಿನ್ ಚಾರ್ಮಾಡಿ, ಅನಿಲ್ ಚಾರ್ಮಾಡಿ, ಉಸ್ಮಾನ್ ಚಾರ್ಮಾಡಿ, ರಮೇಶ್ ಕತ್ತರಿಗುಡ್ಡೆ, ಹರೀಶ್ ದೇವಾಡಿಗ, ಹರೀಶ್ ಪರ್ಲಾಣಿ, ರಘುನಾಥ್ ಗೌಡ ಚಾರ್ಮಾಡಿ, ಇಮ್ರಾನ್ ಚಿಬಿದ್ರೆ, ಅಜೀಜ್ ಚಾರ್ಮಾಡಿ ಉಪಸ್ಥಿತರಿದ್ದರು.