ಜಿಲ್ಲೆ

ಕೆಎಲ್​ಇ ಸಂಸ್ಥೆಯಿಂದ ಸನ್ಮಾನ ಕಾರ್ಯಕ್ರಮ

Dharwada - Santosh Vaidya

ಹುಬ್ಬಳ್ಳಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಇದರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಅ. 7ರಂದು ಬೆಳಗ್ಗೆ 10.30ಕ್ಕೆ ಬಿವಿಬಿ ಕ್ಯಾಂಪಸ್​ನಲ್ಲಿರುವ ಬಯೋಟೆಕ್ ಆಡಿಟೋರಿಯಂನಲ್ಲಿ ನಡೆಯಲಿದೆ.

ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಕೆಎಲ್​ಇ ಸಂಸ್ಥೆ ಹಾಗೂ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಕಾರ್ಯಕ್ರಮ ಆಯೋಜಿಸಿದೆ. ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು.

ಇಸ್ರೋ ವಿಜ್ಞಾನಿ/ಇಂಜಿನಿಯರ್​ಗಳಾದ ರಂಗನಾಥ ಎಕ್ಕುಂಡಿ, ಉಷಾ ಭಂಡಿವಾಡ, ಸುವರ್ಣಾ ಎಲ್., ಶ್ರೇಯಲಾ ರತ್ನಾಕರ, ಸಂಧ್ಯಾ ಕಾಮತ, ದಿಲೀಪ ಶಿರೋಳಿಕರ್, ಕೆ.ಎಚ್. ನವಲಗುಂದ, ಹನುಮಂತರಾಯ ಬಿ., ಪ್ರಮೋದಾ ಹೆಗಡೆ, ಅಬ್ದುಲ್ ರೆಹಮಾನ್ ಖಾನ್, ಪ್ರಶಾಂತ ಎ.ಆರ್., ಶಾಂತಲಾ ಎಸ್.ಎಚ್., ತುಷಾರ ಪಡ್ನಿಸ್, ಮಿಲಿಂದ ಉಂಡಾಲೆ, ಅಭಿಷೇಕ ದೇಶಪಾಂಡೆ, ಮಲ್ಲಿಕಾರ್ಜುನ ಖಾನಾಪುರಿ ಹಾಗೂ ಇಸ್ರೋ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಡಿ.ಆರ್. ಸುಬ್ರಮಣ್ಯಂ, ಅನಿಲಕುಮಾರ ಎಂ., ರಾಮ ಕೆರೂರ, ಹೊಸಮನಿ ಗಿರೀಶ ಮತ್ತು ಎಂ. ರಫೀಕ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಕೆಎಲ್​ಇ ಸಂಸ್ಥೆಯ ಪ್ರಕಟಣೆ ತಿಳಿಸಿದೆ.