ಜಿಲ್ಲೆ

ಒಂಭತ್ತು ಗೃಹರಕ್ಷಕಿಯರಿಗೆ ಸನ್ಮಾನ

Uttara Kannada - Subash Hegde

ಕಾರವಾರ: ಕುಟುಂಬವನ್ನು ನಿಭಾಯಿಸುತ್ತ ಸಾಮಾಜಿಕ ಬದ್ಧತೆಯ ಗೃಹ ರಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ಸೇವೆ ಪ್ರಶಂಸನೀಯ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಘಟಕಗಳ ಒಂಭತ್ತು ಮಹಿಳಾ ಗೃಹ ರಕ್ಷಕಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗೃಹರಕ್ಷಕರಿಗೆ ವೇತನವಿಲ್ಲ. ಕರ್ತವ್ಯಕ್ಕೆ ಹಾಜರಾದರೆ ಅಲ್ಪ ಗೌರವಧನ ದೊರೆಯುತ್ತದೆ. ಆದರೂ ಸಮಾಜ ಸೇವೆಯ ರೀತಿಯಲ್ಲಿ ಹಲವು ಭದ್ರತೆಯ ಕಾರ್ಯಗಳನ್ನು ಜವಾಬ್ದಾರಿಯಿಂದ ನಿಭಾಯಿಸುವ ಗೃಹ ರಕ್ಷಕರ ಕಾರ್ಯ ಶ್ಲಾಘನೀಯ ಎಂದರು.

ಇದನ್ನೂ ಓದಿ :ಸ್ಥಳೀಯ ವಾಹನ ಸಂಚಾರಕ್ಕೆ ಅವಕಾಶ
ಗೃಹ ರಕ್ಷಕ ಜಿಲ್ಲಾ ಕಮಾಂಡೆಂಟ್ ಡಾ.ಸಂಜು ನಾಯಕ ಎಲೆಮರೆಯ ಕಾಯಿಯಂತೆ ಕೆಲಸ ಮಾಡುವ ಗೃಹ ರಕ್ಷಕಿಯರನ್ನು ಗುರುತಿಸಿ, ಗೌರವಿಸುವ ಕಾರ್ಯ ವನ್ನು ಸಮಾಜ ಮಾಡಬೇಕು ಎಂದರು. ಗೃಹ ರಕ್ಷಕ ಘಟಕಾಧಿಕಾರಿಗಳಾದ ರಾಘವೇಂದ್ರ ಗಾಂವಕರ್, ಪ್ರಭು ಮುದಕಣ್ಣನವರ್, ಗೃಹ ರಕ್ಷಕ ವಿನಾಯಕ ನಾಯ್ಕ ಇದ್ದರು.
ಮಂಗಳಾ ಜೋಗಳೇಕರ್ ಶಿರಸಿ, ಗಿರಿಜಾ ನಾಯ್ಕ ಕುಮಟಾ, ಸ್ಮಿತಾ ಗೌಡ ಮಲ್ಲಾಪುರ, ಸವಿತಾ ಗುನಗಿ ದಾಂಡೇಲಿ, ರೂಪಾ ಬಾಂದಿ ಯಲ್ಲಾಪುರ, ಸಂಗೀತಾ ಗಾಂವಕರ್ ಅಂಕೋಲಾ, ಬೇಬಿ ಗೌಡ ಚೆಂಡಿಯಾ, ನಾಗರತ್ನಾ ಹುಲಸ್ವಾರ ಅಂಕೋಲಾ, ಕವಿತಾ ಗುನಗಿ ಕಾರವಾರ ಅವರನ್ನು ಸನ್ಮಾನಿಸಲಾಯಿತು.