ರಾಯಚೂರು : ಜಿ¯್ಲÁಡಳಿತದ ವತಿಯಿಂದ -É.೧೧ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆಂದು ರಾಯಚೂರು ವಿಭಾಗದ ಸಹಾಯಕ ಆಯುಕ್ತರಾದ ಗಜÁನನ ಬಾಳೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಾರ್ಯಗಾರದಲ್ಲಿ ಐಎಎಸ್, ಕೆಎಎಸ್, ಪಿಎಸ್‌ಐ, ಪಿಡಿಒ,ಆರ್‌ಆರ್‌ಬಿಎಸ್‌ಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿ¯್ಲÉಯ ಐಎಎಸ್ ಮತ್ತು ಕೆಎಎಸ್ ಅಽಕಾರಿಗಳು ಮಾರ್ಗದರ್ಶನ ಮಾಡಲಿz್ದÁರೆ. ಅಲ್ಲದೆ ಬೆಂಗಳೂರಿನ ಪ್ರತಿಷ್ಠಿತ ಕೋಚಿಂಗ್ ಸೆಂಟರಗಳು ಭಾಗವಹಿಸುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬAಽಸಿದAತೆ ಪುಸ್ತಕ ಮಳಿಗೆಗಳನ್ನು ಹಾಕಲಾಗುವುದು. ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ.ಸ್ಪರ್ಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ ವರ್ಮ, ಗ್ರೇಡ್-೨ ತಹಶೀಲ್ದಾರ್ ಭೀಮರಾಯ, ಡಾ.ಬಾಬುರಾವï ಎಂ.ಶೇಗುಣಿಸಿ ಇದ್ದರು.