ಜಿಲ್ಲೆ

ಗಟಾರು ಮಾಡಲು ರಸ್ತೆ ಅಗೆದವರು ನಾಪತ್ತೆ…!

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ಮಳೆಗಾಲದೊಂದಿಗೆ ಡೆಂಘೆ, ಚಿಕೂನ್ ಗುನ್ಯಾದಂಥ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಡೆಂಘೆ ತಡೆಗೆ ಜಿಲ್ಲಾಡಳಿತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜನಜಾಗೃತಿ ಮೂಡಿಸುತ್ತಿದೆ. ಆದರೆ, ಇದರ ಪರಿವೆಯೇ ಇಲ್ಲದಂತೆ ಮಹಾನಗರ ಪಾಲಿಕೆಯವರು ವರ್ತಿಸುತ್ತಿದ್ದಾರೆ.
ಇಲ್ಲಿನ ಮೆಹಬೂಬನಗರದ ಗಾದಿ ಕಾರ್ಖಾನೆಯಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಗಟಾರು ನಿಮÁðಣ ಮಾಡುವುದಾಗಿ ಹೇಳಿ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಸುಮಾರು 8- 10 ದಿನದ ಹಿಂದೆ ರಸ್ತೆ ಅಗೆದು ಹೋದವರು ಮರಳಿ ಬಂದಿಲ್ಲ. ಮಳೆಯಾದಾಗ ನೀರು ಹರಿದು ಹೋಗದೆ ರಸ್ತೆ ಮೇಲೆ ನಿಲ್ಲುತ್ತಿದೆ. ಇದರಿಂದ ಸಾರ್ವಜನಿಕರು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ.