ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿರುವ ಇಲ್ಲಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆ. 6ಕ್ಕೆ ವಿಚಾರಣೆ ಮುಂದೂಡಿ ಫಯಾಜ್ ಖುದ್ದು ಹಾಜರು ಪಡಿಸುವಂತೆ ಸೋಮವಾರ ಆದೇಶಿಸಿದೆ.
ಪೊಲೀಸರು ಬಂಧನ ಪ್ರಕ್ರಿಯೆ ಸರಿಯಾಗಿ ನಡೆಸಿಲ್ಲ. ಪಾಲಕರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಈ ಆಧಾರದಲ್ಲಿ ಫಯಾಜ್‌ಗೆ ಜಾಮೀನು ನೀಡುವಂತೆ ಫಯಾಜ್ ಪರ ವಕೀಲರು ಮನವಿ ಮಾಡಿದ್ದರು. ನೇಹಾ ಪರ ವಕೀಲರು ಹಾಗೂ ಸಿಐಡಿ ವಿಶೇಷ ಸರ್ಕಾರಿ ಅಭಿಯೋಜಕ ಮಹೇಶ ವೈದ್ಯ ವಾದ ಮಂಡಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು, ಅರ್ಜಿ ತಿರಸ್ಕರಿಸಿದ್ದು, 1 ವರ್ಷ ನಾಲ್ಕು ತಿಂಗಳಿಂದ ಧಾರವಾಡ ಕಾರಾಗೃಹದಲ್ಲಿರುವ ಫಯಾಜ್ ಹೊರಬರುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.