ಸಾಗರ: ಸಮಾಜದಲ್ಲಿ ವಿರಶೈವ ವಧು-ವರರ ವೇದಿಕೆಯನ್ನು ನಿರ್ಮಿಸಿರುವುದರಿಂದ ಕಲ್ಯಾಣದ ಕಾರ್ಯಕ್ರಮಕ್ಕೆ ಸಹಕಾರಿಯಾಗಿದೆ. ವಧು-ವರರು ಮುಖಾಮುಖಿಯಾಗಿಸುವಲ್ಲಿ ನಮ್ಮ ಸಂಸ್ಥೆ ವೇದಿಕೆ ನಿರ್ಮಿಸಿಕೊಡುತ್ತ್ತ ಬಂದಿದೆ ಎಂದು ವೀರಶೈವ ವಧು-ವರರ ಕೇಂದ್ರದ ಅಧ್ಯಕ್ಷ ಎಸ್.ಸಿ.ಗಂಗಾಧರ ಗೌಡ ಹೇಳಿದರು.
ನಗರದ ವೀರಶೈವ ವಿದ್ಯಾರ್ಥಿನಿಲಯ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವೀರಶೈವ ವಧು-ವರರ ಕೇಂದ್ರದ ವಾರ್ಷಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವೈವಾಹಿಕ ಸಂಬಂಧವನ್ನು ಜೋಡಿಸುವುದು ಸವಾಲಿನ ಕೆಲಸ. ಸಮಾಜದ ಹಿರಿಯರು ಮುಂದಾಲೋಚನೆಯಿಂದ ಕೇಂದ್ರವನ್ನು ಸ್ಥಾಪಿಸಿದ್ದರು. ಅದು ಸಾಕಷ್ಟು ಪೋಷಕರಿಗೆ ಅನುಕೂಲ ಕಲ್ಪಿಸಿದೆ. ಕೇಂದ್ರದ ನೂತನ ವೆಬ್‌ಸೈಟ್ ಮೂಲಕ ಹೆಚ್ಚಿನ ವೈವಾಹಿಕ ಸಂಬಂಧ ಜೋಡಿಸಲು ಸಾಧ್ಯವಾಗುತ್ತಿದೆ.ವೀರಶೈವ ವಧು-ವರರನ್ನು ಮುಖಾಮುಖಿಯಾಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಸಮಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಪಾಲಕರು ವಿವಾಹ ವಯಸ್ಸಿಗೆ ಬಂದಿರುವ ಮಕ್ಕಳ ಹೆಸರನ್ನು ಸಂಸ್ಥೆಯಲ್ಲಿ ನೋಂದಾಯಿಸುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೆ.ಜಿ.ಜಗದೀಶ್ ಒಡೆಯರ್, ರಾಜಶೇಖರ ಗೌಡ, ಕಮಲಾಕರ, ಸತೀಶ್ ಕಾಗೋಡು, ಪ್ರವೀಣ್ ಒಡೆಯರ್, ಭೋಜಕುಮಾರ್ ಗೌಡ ಇತರರಿದ್ದರು.