ಜಿಲ್ಲೆ

ತಪ್ಪು ಮಾಡಿದರೆ ಪೊಲೀಸರಿಗೆ ದೂರು ನೀಡಿ

ಕವಿತಾಳ: ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಬೇಕು ಎಂದು ಪಿಎಸ್‌ಐ ವೆಂಕಟೇಶ ನಾಯಕ ಹೇಳಿದರು.

ಜಂಗಮರಹಳ್ಳಿಯಲ್ಲಿ ಮಸ್ಕಿಯ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಯಾರೂ ತಪ್ಪು ಮಾಡಬಾರದು. ತಪ್ಪು ಮಾಡಿದರೆ ಪೊಲೀಸರಿಗೆ ದೂರು ನೀಡಬೇಕು ಎಂದರು.

ಎನ್‌ಎಸ್‌ಎಸ್ ಶಿಬಿರದ ಅಧಿಕಾರಿ ಶಿವಗೇನಪ್ಪ ಮಾತನಾಡಿ, ಜೂ.30ರವರೆಗೆ ಶಿಬಿರ ನಡೆಯಲಿದೆ ಎಂದು ತಿಳಿಸಿದರು.ಉಪನ್ಯಾಸಕರಾದ ಡಾ ಪಂಪಾಪತಿ, ಚನ್ನಬಸವ, ಮುಜಾವರ್, ಚಿದಾನಂದ, ಸುರೇಶ ಬಳಗಾನೂರು, ಸಿದ್ದಾರ್ಥ ಪಾಟೀಲ್. ಎಸ್‌ಡಿಎಮ್‌ಸಿ ಅಧ್ಯಕ್ಷ ರೇಣುಕಾ ಬಸವ ರಾಜ.ಸದಸ್ಯರಾದ ವೆಂಕಟೇಶ, ಚಂದ್ರಶೇಖರ, ಡಾ ವಿರುಪನಗೌಡ, ನೌರೀನ್ ಇದ್ದರು.