ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೆದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಹೊಟ್ಟೆ ಉಬ್ಬರ, ಎದೆ ಉರಿ, ಆಯಾಸ, ಹಸಿವಾಗದಿರುವುದು ಮತ್ತು ಫ್ಯಾಟಿ ಲಿವರ್ಸ್ಗೆ ಸಂಬಂಧಿತ ವಿಶೇಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಸೋಮವಾರ ಆರಂಭಗೊಂಡಿದ್ದು, ಆ. 12ರವರೆಗೆ ನಡೆಯಲಿದೆ.
ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ರೋಗಿಗಳು ಭೇಟಿ ನೀಡಬಹುದು ಎಂದು ಪ್ರಾಚಾರ್ಯ ಡಾ. ಪ್ರಶಾಂತ ಎ. ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.