New One Hundred Rupee Indian Currency 
ಜಿಲ್ಲೆ

ತಂದೆ ಮಗನ ಯಾಮಾರಿಸಿ 6.50 ಲಕ್ಷ ರೂ ಕದ್ದ ಖದೀಮ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದಲ್ಲಿ ತಂದೆ ಮಗನ ಗಮನವನ್ನು ಬೇರೆಡೆಗೆ ಸೆಳೆದು, ದ್ವಿಚಕ್ರ ವಾಹನದಲ್ಲಿದ್ದ 6.50 ಲಕ್ಷ ರೂಗಳನ್ನು ಕಳ್ಳ ಎಗರಿಸಿಕೊಂಡು ಪರಾರಿಯಾಗಿದ್ದಾನೆ.

ಇಲ್ಲಿನ ರೇಷ್ಮೆಯ ಇಲಾಖೆಯ ಡಿ ದರ್ಜೆ ನೌಕರ ನಾರಾಯಣಸ್ವಾಮಿ ಮತ್ತು ಮಗ ಪವನ್ ಹಣವನ್ನು ಕಳೆದುಕೊಂಡವರು. ನಗರದ ಕೋಲಾರ ಕ್ರಾಸ್ ಬಳಿ ನಿಂತಿಕೊಂಡಿದ್ದವರಿಗೆ ಅಂಗಿಯ ಮೇಲೆ ಏನೋ ಬಿದ್ದಿದೆ ಮತ್ತು ನೆಲದ ಮೇಲೆ 200 ರೂ ನೋಟು ಬಿದ್ದಿದೆ ಎಂಬುದಾಗಿ ಪಲ್ಸರ್ ಬೈಕ್ ಸವಾರನೊಬ್ಬ ಹೇಳಿ, ಇಬ್ಬರ ಗಮನವನ್ನು ಬೇರೆಡೆ ಸೆಳೆದಿದ್ದಾನೆ. ಹಾಗೆಯೇ ತಂದೆ ಮಗ ನಿಲ್ಲಿಸಿದ ವಾಹನದಲ್ಲಿನ ಬಾಕ್ಸ್ ನಿಂದ 6.50 ಲಕ್ಷ ರೂ ತೆಗೆದುಕೊಂಡು ಪರಾರಿಯಾಗಿದ್ದಾನೆ. ಮನೆಗೆ ಬಂದು ಪರಿಶೀಲಿಸಿದಾಗ ಮಾಲೀಕರಿಗೆ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ.

ನಗರದ ಕನ್ನಂಪಲ್ಲಿಯಲ್ಲಿ ಖರೀದಿಸಿದ ಸೈಟ್‌ಗೆ ಹಣ ನೀಡಲು ಬ್ಯಾಂಕಿನಿಂದ 6.50 ಲಕ್ಷ ರೂಗಳನ್ನು ಎಸ್‌ಬಿಐ ಬ್ಯಾಂಕಿನಿಂದ ಡ್ರಾ ಮಾಡಲಾಗಿತ್ತು. ಹಿಂಬಾಲಿಸಿಕೊಂಡ ಬಂದ ಕಳ್ಳ, ಕೊನೆಗೆ ಗಮನವನ್ನು ಬೇರೆಡೆ ಸೆಳೆದು ಹಣವನ್ನು ಕದ್ದಿದ್ದಾನೆ ಎಂದು ಶಂಕಿಸಲಾಗಿದೆ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.