ಗದಗ: ಮಲಗಿದ್ದ ತಂದೆಯನ್ನು ಮಗನೇ ಭೀಕರವಾಗಿ ಕೊಚ್ಚಿ ಕೊಂದು ಹಾಕಿರುವ ಭಯಾನಕ ಪ್ರಕರಣವೊಂದು ನಡೆದಿದೆ. ಗದಗ ಜಿಲ್ಲೆಯಲ್ಲಿ ಇಂಥದ್ದೊಂದು ಭೀಕರ ಕೊಲೆ ಇಂದು ನಡೆದಿದೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿನ ಗಣೇಶ್ (51) ಮಗನಿಂದ ಕೊಲೆಗೀಡಾದ ತಂದೆ. ಇವರ ಪುತ್ರ ವಿಜಯ್ ಎಂಬಾತ ಈ ಕೊಲೆ ಮಾಡಿದ್ದಾನೆ. ತಂದೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ವಿಜಯ್ ಕೊಲೆ ಮಾಡಿದ್ದಾನೆ.
ಇಷ್ಟೊಂದು ಭೀಕರವಾಗಿ ಮಗನೇ ಕೊಲೆ ಮಾಡಲು ಕಾರಣ ಏನು ಎಂಬ ಕುರಿತು ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸದ್ಯಕ್ಕೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಅವರೊಂದಿಗೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.