ಜಿಲ್ಲೆ

ಕ್ಷುಲ್ಲಕ ವಿಚಾರವಾಗಿ ಗಲಾಟೆ, ತಂದೆಯಿಂದಲೇ ಮಗನ ಬರ್ಬರ ಕೊಲೆ

theerthaswamy

ಬೆಂಗಳೂರು: ಕ್ಷುಲ್ಲಕ ವಿಚಾರವಾಗಿ ಶುರುವಾದ ಗಲಾಟೆಯಲ್ಲಿ ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯದ ಕೃಷ್ಣ ಕನ್ವೆನ್ಷನ್ ಹಾಲ್ ಬಳಿ ನಡೆದಿದೆ.

ಆರೋಪಿ ತಂದೆ ಗುರುರಾಜ್ ಹಾಗೂ ಮಗ ಸಂತೋಷ್ ಕೊಲೆ ದುರ್ದೈವಿ. ಇಬ್ಬರೂ ಆರ್​ಟಿಓ ದಲ್ಲಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ತಂದೆ ಗುರುರಾಜ್ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದ.
ಇಂದು ಮಧ್ಯಾಹ್ನ ತಂದೆ ಮಗನ ಜೊತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಚಾಕುವಿನಿಂದ ಮಗನನ್ನ ಇರಿದು ತಂದೆ ಗುರುರಾಜ್ ಕೊಲೆ ಮಾಡಿದ್ದಾನೆ.

ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.