ಹುಬ್ಬಳ್ಳಿ: ನಿವೃತ್ತ ನೌಕರರೊಬ್ಬರರ ಮಗನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿದ ವಂಚಕರು, ಅವರ ಖಾತೆಯಿಂದ 35.01 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಹುಬ್ಬಳ್ಳಿಯ ವೆಂಕನಗೌಡ ಹಾಗೂ ಪ್ರಶಾಂತ ಎಂಬುವರಿಗೆ ವಂಚಿಸಿದ್ದಾರೆ. ಪ್ರವೀಣ ಮತ್ತು ಮುನೀರ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಮೌರ್ಯ ಕಂಪ್ಯೂಟರ್ ಸೆಂಟರ್‌ನಲ್ಲಿದ್ದಾಗ ಪ್ರವೀಣ ಮತ್ತು ಮುನೀರ ಎಂಬುವವರು ವೆಂಕನಗೌಡ ಹಾಗೂ ಪ್ರಶಾಂತ ಅವರನ್ನು ಪರಿಚಯಿಸಿಕೊಂಡಿದ್ದಾರೆ. ಪ್ರಶಾಂತಗೆ ಕೆಲಸ ಕೊಡಿಸುವುದಾಗಿ ನಂಬಿಸಿ 35.01 ಲಕ್ಷ ರೂ. ವಿವಿಧ ಬ್ಯಾಂಕ್ ಖಾತೆಗಳಿಂದ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.