ದಕ್ಷಿಣ ಕನ್ನಡ: ಕೋಳಿ ಸಾರಿನ ವಿಚಾರಕ್ಕೆ ತಂದೆ-ಮಗನ ನಡುವೆ ಗಲಾಟೆಯಾಗಿದ್ದು ಮಗನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಗುತ್ತಿಘಾರು ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿ ಹೆಸರು ಶಿವರಾಮ್(35) ಪತ್ನಿ ನೀಡಿದ ದುರಿನ ಮೇರೆಗೆ ಆರೋಪಿ ತಂದೆ ಶೀನಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.
ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು ಶಿವರಾಮ್ ಮದ್ಯಪಾನ ಮಾಡಿಕೊಂಡು ಮನೆಗೆ ಹಿಂತಿರುಗಿದಾಗ ಊಟದ ಸಮಯದಲ್ಲಿ ಕೋಳಿ ಸಾರು ಖಾಲಿಯಾಗಿರುವ ಬಗ್ಗೆ ಮನೆಯವರ ಜೊತೆ ಜಗಳವಾಡಿದ್ದಾನೆ. ಈ ವೇಳೆ ಶೀನಪ್ಪ ಹಾಗೂ ಶಿವರಾಮ್ ನಡುವೆ ಮಾತಿನ ಚಕಮಕಿ ನಡೆದಿದ್ದು ಪರಸ್ಥಿತಿ ವಿಕೋಪಕ್ಕೆ ತಿರುಗಿ ಮಗನ ತಲೆಗೆ ತಂದೆ ಶೀನಪ್ಪ ದೊಣ್ಣೆಯಿಂದ ಹೊಡೆದಿದ್ದಾರೆ.
ತಲೆಗೆ ಪೆಟ್ಟು ಬಿದ್ದು ಕುಸಿದು ಬಿದ್ದ ಶಿವರಾಮ್ರನ್ನು ಕೂಡಲ್ಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.