ಜಿಲ್ಲೆ

ಮಗನನ್ನೇ ಕೊಂದ ತಂದೆ

ಗಂಗಾಧರ ಬಿ ವಿ

ರಾಮನಗರ: ಮಲಗಿದ್ದ ಮಗನನ್ನು ತಂದೆಯೇ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಕೋಜನಹಳ್ಳಿಯಲ್ಲಿ ನಡೆದಿದೆ. 

ಲಕ್ಕೋಜನಹಳ್ಳಿ ಗ್ರಾಮ ಭಾಸ್ಕರ್ (31) ಕೊಲೆಯಾದ ವ್ಯಕ್ತಿ . ಕೃಷ್ಣಪ್ಪ (60) ವರ್ಷ ಕೊಲೆ ಮಾಡಿರೋ ಆರೋಪಿ ತಂದೆ. 

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಜೂಜಾಡಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. 

ನಂತರ ಊರಿಗೆ ಬಂದು ಸೇರಿಕೊಂಡಿದ್ದ ಈತ ಹಣದ ವಿಚಾರವಾಗಿ ತಂದೆಯೊಂದಿಗೆ ಆಗ್ಗಾಗ್ಗೆ ಜಗಳ ಆಡುತ್ತಿದ್ದ. ಇತ್ತೀಚಿಗೆ ಜಮೀನು ಮಾರಾಟ ಮಾಡಿ ಬಂದಿದ್ದ ಹಣಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. 

ಶುಕ್ರವಾರ ರಾತ್ರಿಯೂ ಸಹ ಕುಡಿದ ಮತ್ತಿನಲ್ಲಿ ಇಬ್ಬರಿಗೂ ಜಗಳವಾಗಿದ್ದು, ಮನೆಯಲ್ಲಿ ಮಲಗಿದ್ದಾಗ  ಮಗನನ್ನು ಮಚ್ಚಿನಿಂದ ಕೊಚ್ಚಿ   ಕೃಷ್ಣಪ್ಪ ಕೊಲೆ ಮಾಡಿದ್ದಾನೆ. 

 ಘಟನೆ ನಂತರ ಆರೋಪಿ ಕೃಷ್ಣಪ್ಪನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.