ಜಿಲ್ಲೆ

ಹಸುಳೆಗೆ ಅಳುವೇ ಮುಳುವಾಯಿತು; ಕರುಳ ಕುಡಿಯನ್ನು ಕೊಂದ ತಂದೆ

ಧಾರವಾಡ: ಚಿಕ್ಕ ಮಕ್ಕಳು ಅಳುವುದು ಸಹಜ. ಮಧ್ಯರಾತ್ರಿಯಲ್ಲೂ ಅಳುವ ಮಕ್ಕಳನ್ನು ತಂದೆ- ತಾಯಿ ಸಂಭಾಳಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ತಂದೆ ಅಳುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆ ಬಡಿದು ಕೊಂದು ಹಾಕಿದ್ದಾನೆ. ಇಂಥ ಹೃದಯವಿದ್ರಾವಕ ಘಟನೆ ನಡೆದಿದ್ದು ತಾಲೂಕಿನ ಯಾದವಾಡ ಗ್ರಾಮದಲ್ಲಿ.
ಶಂಭುಲಿ೦ಗ- ಸವಿತಾ ಶಹಾಪೂರಮಠ ದಂಪತಿಗೆ ಶ್ರೇಯಾ ಎಂಬ ಒಂದು ವರ್ಷದ ಹೆಣ್ಣು ಮಗುವಿತ್ತು. ರಾತ್ರಿ ವೇಳೆ ಮಗು ಸಹಜವಾಗಿ ಅಳುತ್ತಿತ್ತು. ಇದರಿಂದ ತಂದೆ ಶಂಬುಲಿ೦ಗನಿಗೆ ಸಹಿಸಲಾಗುತ್ತಿರಲಿಲ್ಲ. ಅವಳನ್ನು ಕೊಂದು ಬಿಟ್ಟರೆ ನೆಮ್ಮದಿಯಿಂದ ನಿದ್ರೆ ಮಾಡಬಹುದು ಎಂದು ಪದೇಪದೇ ಗೊಣಗುತ್ತಿದ್ದ. ಫೆ. 27ರಂದು ಊಟದ ವಿಚಾರವಾಗಿ ಶಂಭುಲಿ೦ಗ ಹಾಗೂ ಪತ್ನಿಯ ಮಧ್ಯೆ ಜಗಳವಾಗಿತ್ತು. ಮಧ್ಯರಾತ್ರಿ 2 ಗಂಟೆಗೆ ಮಗು ಎಚ್ಚರವಾಗಿ ಅಳಲಾರಂಭಿಸಿತ್ತು. ಇದರಿಂದ ಸಿಟ್ಟಿಗೆದ್ದ ಶಂಭುಲಿ೦ಗ ಹಸುಳೆಯ ಎರಡೂ ಕಾಲುಗಳನ್ನು ಹಿಡಿದು ಮೇಲಕ್ಕೆ ಎತ್ತಿ ತಲೆಯನ್ನು ನೆಲಕ್ಕೆ ಬಡಿದಿದ್ದಾನೆ. ತಲೆಗೆ ತೀವ್ರ ಗಾಯಗೊಂಡಿದ್ದ ಶ್ರೇಯಾಳನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಗು ಗುರುವಾರ ಮೃತಪಟ್ಟಿದೆ.
ಈ ಕುರಿತು ಸವಿತಾ ನೀಡಿದ ದೂರಿನ ಅನ್ವಯ ಗರಗ ಠಾಣೆ ಪೊಲೀಸರು ಆರೋಪಿ ಶಂಭುಲಿ೦ಗನನ್ನು ಬಂಽಸಿದ್ದಾರೆ.