ಜಿಲ್ಲೆ

ಮಗನಿಂದಲೇ ತಂದೆ ಹತ್ಯೆ

ಲೋಕೇಶ್ ಮನು. ಡಿ

ಆಲೂರು: ಕುಡಿದ ಮತ್ತಿನಲ್ಲಿ ತಾಲೂಕಿನ ಕಡಬಗಾಲ ಗ್ರಾಮದಲ್ಲಿ ಪುತ್ರನೇ ತಂದೆಯನ್ನು ಹತ್ಯೆಗೈದಿದ್ದಾನೆ.
ತಾಲೂಕಿನ ಕಡಗಬಾಲ ಗ್ರಾಮದ ನಿವಾಸಿ ಚಂದ್ರಶೇಖರ್(62) ಮೃತರು. ಪುತ್ರ ಸಚ್ಚಿನ್(29) ಕೊಲೆ ಆರೋಪಿ.
ಘಟನೆ ವಿವರ: ಭಾನುವಾರ ರಾತ್ರಿ ಸಚಿನ್ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದು ತನಗೆ ಲಾರಿ ಕೊಡಿಸುವಂತೆ ತಂದೆ ಚಂದ್ರಶೇಖರ್‌ರನ್ನು ಒತ್ತಾಯಿಸಿದ್ದಾನೆ. ಆದರೆ ತಂದೆ ಲಾರಿ ಕೊಡಿಸಲು ನಿರಾಕರಿಸಿದ್ದಕ್ಕೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಕೊಪಗೊಂಡ ಪುತ್ರ ಸಚಿನ್ ತಂದೆಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮ ಚಂದ್ರಶೇಖರ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಸಚಿನ್ ಪರಾರಿಯಾಗಿದ್ದನು.

ಮೃತ ಚಂದ್ರಶೇಖರ್ ಪತ್ನಿ ಯಶೋದಾ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಆಲೂರು ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.