ಬಂಗಾರಪೇಟೆ: ಬೇರೆಯವರ ಹಸು ಜಮೀನಿನಲ್ಲಿ ಮೇಯ್ದಿದ್ದಕ್ಕೆ ನಿಮ್ಮದೇ ಹಸು ಮೇಯ್ದಿದೆ ಎಂದು ಆರೋಪಿಸಿ ಹಳೇ ವೈಷಮ್ಯದಿಂದ ತಂದೆ ಮತ್ತು ಮಗನ ಮೇಲೆ ದೊಣ್ಣೆ&ಕೋಲುಗಳಿಂದ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಲಾಗಿದೆ.
ತಾಲೂಕಿನ ದಾಸರ ಹೊಸಹಳ್ಳಿ ಮಂಜುನಾಥ್ (41), ಮಗ ನವೀನ್ (20) ಗಾಯಗೊಂಡಿದ್ದು, ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಜುನಾಥ್ ಮತ್ತು ಆರೋಪಿ ನಾರಾಯಣಪ್ಪ ಅವರ ಜಮೀನು ಅಕ್ಕಪಕ್ಕದಲ್ಲಿದ್ದು, 3 ತಿಂಗಳ ಹಿಂದೆ ಹಸು ಮೇವು ತಿಂದಿದ್ದರಿಂದ ಅವಾಚ್ಯ ಶಬ್ದದಿಂದ ನಾರಾಯಣಪ್ಪ ಮಂಜುನಾಥ್ಗೆ ಬೈದಿದ್ದರು. ಅದಾದ ನಂತರ ಬುಧವಾರ ಸಂಜೆ ನವೀನ್ ಮತ್ತು ಅವರ ತಂದೆ ಮಂಜುನಾಥ ಆರೋಪಿಯ ಜಮೀನಿನ ಬಳಿ ಹಸುಗಳನ್ನು ಹಿಡಿದುಕೊಂಡು ಬರುತ್ತಿದ್ದಾಗ ನಿಮ್ಮ ಹಸುಗಳೇ ನಮ್ಮ ಜಮೀನಿನಲ್ಲಿ ಮೇಯ್ದಿವೆ ಎಂದು ಹೇಳಿ ನವೀನ್ ತಲೆಗೆ ಬಲವಾಗಿ ಹೊಡೆದಿದ್ದಾರೆ.
ಮಗನ ಮೇಲೆ ಹಲ್ಲೆಯಾಗುತ್ತಿದ್ದನ್ನು ನೋಡಿದ ತಂದೆ ಬಿಡಿಸಲು ಬಂದಾಗ ಅವರ ಮೇಲೂ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಲಾಗಿದೆ. ಗಾಯಾಳು ನವೀನ್ ನೀಡಿದ ದೂರಿನ ಮೇಲೆ ಗ್ರಾಮದ ಗಿರೀಶ್, ನಾರಾಯಣಪ್ಪ ಮತ್ತು ಸತೀಶ್ ವಿರುದ್ಧ ಬಂಗಾರಪೇಟೆ ಪೊಲೀಸ್ ಠಾಣೆೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.