ಜಿಲ್ಲೆ

ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ

ಮರಿದೇವ ಹೂಗಾರ

ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಐವರು ಸೇರಿ ಇಬ್ಬರ ಮೇಲೆ ಕಟ್ಟಿಗೆಯಿಂದ ಮಾರಾಣಾಂತಿಕ ಹಲ್ಲೆ ಮಾಡಿರುವ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬುಲ್ಡೋಜರ್ ನಗರದ ಜಮೀರ್ ಅತ್ತಾರ, ಎಸ್.ಎಂ. ಕೃಷ್ಣ ನಗರದ ಜಾಫರ್ ತುಮಕೂರು ಮೇಲೆ ಹಲ್ಲೆ ಮಾಡಲಾಗಿದೆ.

ನಗರದ ಜಿದ್ದಿ ಮಲ್ಲಿಕ, ಜಿಶಾನ, ವಿಕ್ಕಿ ವಜ್ಜನವರ, ಸಲೀಂ ಸೇರಿ ಇತರರು ಹಲ್ಲೆ ಮಾಡಿದ್ದಾರೆ. ಜಮೀರ್ ಮತ್ತು ಜಾಫರ್ ನಿಂತಾಗ ತಂಟೆ ತೆಗೆದು ಕಟ್ಟಿಗೆಯಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.