ಹೊಸಕೋಟೆ ಸಂಜೆ ಟ್ಯೂಷನ್ ಮುಗಿಸಿಕೊಂಡು ಸ್ನೇಹಿತನನ್ನು ಮನೆಗೆ ಡ್ರಾಪ್ ಮಾಡಲು ಬೈಕ್‌ನಲ್ಲಿ ತೆರಳುತ್ತಿದ್ದ ನಗರದ ಸೇಂಟ್ ಜೋಸ್ೆ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಸೈಯದ್ ಇರ್ಶಾನ್(18) ಎಂಬಾತನನ್ನು ಕಣ್ಣೂರಳ್ಳಿ ರಸ್ತೆಯ ಟ್ರ್ಯಾಕ್ಟರ್ ಗ್ಯಾರೇಜ್ ವೃತ್ತದ ಬಳಿ ಅಡ್ಡಗಟ್ಟಿ ನಗರದ ಮಟನ್ ಮಾರ್ಕೆಟ್‌ನ ಯುವಕರ ಗುಂಪು ಮಾರಣಾಂತಿಕ ಹಲ್ಲೆ ಮಾಡಿದೆ.
ಸೈಯದ್ ಇರ್ಶಾದ್ ಮೇಲೆ ಮಚ್ಚು, ಕ್ರಿಕೆಟ್ ಬ್ಯಾಟ್ ಹಾಗೂ ಚಾಕುಗಳಿಂದ ಹಲ್ಲೆ ಮಾಡಿದ್ದು, ಎರಡು ಕೈಗಳ ಮಧ್ಯದ ಬೆರಳು ಆರ್ಧಕ್ಕೆ ತುಂಡಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಹಲ್ಲೆ ಮಾಡಿದ ಮಟನ್ ಮಾರುಕಟ್ಟೆಯ ಖದೀರ, ಗೌಸ, ಫರಾಜ್, ಮಸ್ತಾನ್, ನವಾಜ್, ಇಜಾಜ್, ಶಾಹಿದ್, ಜುನೇದ್, ರೋಷನ್ ಪರಾರಿಯಾಗಿದ್ದು, ಎಲ್ಲರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಣ ತಿಳಿಸಿ ಹೊಡೆಯಿರಿ ಎಂದರೂ ಬಿಡಲಿಲ್ಲ!
ಯಾರನ್ನೋ ಹೊಡೆಯಲು ಹೋಗಿ ಅದೇ ಹೋಲಿಕೆಯ ಸೈಯದ್ ಇರ್ಶಾದ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದ್ದು, ಹಲ್ಲೆ ಸಂದರ್ಭದಲ್ಲಿ ಸೈಯದ್ ಇರ್ಶಾದ್ ಹಲ್ಲೆಗೆ ಕಾರಣ ತಿಳಿಸಿ ನಂತರ ಹೊಡೆಯುರಿ ಎಂದು ಕೂಗಾಡಿದರೂ ಗ್ಯಾಂಗ್ ಮನಸೋ ಇಚ್ಛೆ ಹಲ್ಲೆ ನಡೆಸಿದೆ. ನಂತರ ನಮಗೆ ಬೇಕಾದ ವ್ಯಕ್ತಿ ಇವನಲ್ಲ ಎಂದು ತಿಳಿದು ಸ್ಥಳದಿಂದ ಎಲ್ಲರೂ ಪರಾರಿಯಾಗಿದ್ದಾರೆ.