ಜಿಲ್ಲೆ

ಟೋಲ್‌ಗಳಲ್ಲಿ ಾಸ್ಟ್‌ಟ್ಯಾಗ್ ಗೊಂದಲ,  ಸಿಬ್ಬಂದಿಯೊಂದಿಗೆ ವಾಹನ ಸವಾರರ ಮಾತಿನ ಸಮರ, ಸಾರ್ವಜನಿಕರ ಆಕ್ರೋಶ

ಆನೇಕಲ್: ಾಸ್ಟ್‌ಟ್ಯಾಗ್ ಕಡ್ಡಾಯವಾಗಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅತ್ತಿಬೆಲೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವೆ ಬುಧವಾರ ಮಾತಿನ ಚಕಮಕಿ ನಡೆಯಿತು. ಸ್ಕ್ಯಾನ್ ಆಗದ ವಾಹನ ಸವಾರರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾದರೆ, ಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳದ ವಾಹನಗಳಿಗೆ ದುಪ್ಪಟ್ಟು ಸುಂಕ ಕಟ್ಟುವ ಅನಿವಾರ್ಯಕ್ಕೆ ಬಿದ್ದ ವಾಹನ ಸವಾರರು ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಬಾರ್‌ಕೋಡ್ ಸ್ಕ್ಯಾನ್ ಆಗದ ಹಿನ್ನೆಲೆಯಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದ ದೃಶ್ಯ ಕಂಡುಬಂತು. ಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿದ್ದರೂ ಟೋಲ್‌ನಲ್ಲಿ ಹಣ ಪಾವತಿಸಬೇಕಾಗಿದ್ದರಿಂದ ಚಾಲಕರು ಬೇಸರ ವ್ಯಕ್ತಪಡಿಸಿದರು. ಅತ್ತಿಬೆಲೆ ಟೋಲ್‌ನಲ್ಲಿ ಅಗತ್ಯ ಕ್ರಮಕೈಗೊಂಡಿದ್ದರೂ ಗೊಂದಲದಿಂದಾಗಿ ವಾಹನ ದಟ್ಟಣೆ ಕಂಡುಬಂತು. ಸುಗಮ ಸಂಚಾರಕ್ಕೆ ಟೋಲ್ ಸಿಬ್ಬಂದಿ ಪರದಾಡುವುದರೊಂದಿಗೆ ವಾಹನ ಸವಾರರ ಆಕ್ರೋಶ ಎದುರಿಸಬೇಕಾಯಿತು.

ಾಸ್ಟ್‌ಟ್ಯಾಗ್ ಪಡೆದಿದ್ದೇವೆ. ಆದರೆ ಟೋಲ್ ಬಳಿ ಮುಂದಿನ ವಾಹನ ಸಾಗದಿರುವುದರಿಂದ ಗಂಟಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಯಾರ ಅನುಕೂಲಕ್ಕೆ ಈ ವ್ಯವಸ್ಥೆ ಮಾಡಿದ್ದಾರೋ ತಿಳಿಯುತ್ತಿಲ್ಲ. ಕಮಲಮ್ಮ, ಬೆಂಗಳೂರು

ನೆಲಮಂಗಲದಲ್ಲಿ ಸಹಜ ಸ್ಥಿತಿ: ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಟೋಲ್‌ನಲ್ಲಿ ಸಹಜ ಸ್ಥಿತಿ ಮುಂದುವರಿದಿದೆ. ಾಸ್ಟ್‌ಟ್ಯಾಗ್ ಲೈನ್‌ನಲ್ಲಿ ಸಾಗುವ ವಾಹನಗಳಿಗೆ ಬುಧವಾರ ರಿಯಾಯಿತಿ ನೀಡಿರುವುದರಿಂದ ಯಾವುದೇ ಗೊಂದಲವಾಗಿಲ್ಲ. ನಾಳೆಯಿಂದ ನಿಯಮ ಜಾರಿಯಾಗಲಿರುವ ಬಗ್ಗೆ ಟೋಲ್ ಸಿಬ್ಬಂದಿ ವಾಹನ ಸವಾರರಿಗೆ ಅರಿವು ಮೂಡಿಸುತ್ತಿದ್ದರು. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಾಮೂಲಿ ದಿನಕ್ಕಿಂತ ಹೆಚ್ಚು ವಾಹನದಟ್ಟಣೆ ಕಂಡುಬಂದಿದೆ. ಹೊಸಕೋಟೆಯಲ್ಲಿ ವಿತರಣೆ: ಹೊಸಕೋಟೆ ಟೋಲ್‌ನಲ್ಲಿ ಾಸ್ಟ್‌ಟ್ಯಾಗ್ ವಿತರಣೆ ನಡೆಯುತ್ತಿದೆ. ಅಳವಡಿಸಿಕೊಳ್ಳದ ವಾಹನಗಳಿಗೆ ಪ್ರತ್ಯೇಕ ಲೈನ್ ಮೀಸಲಿಟ್ಟಿದ್ದು, ವಾಹನಗಳು ಎಂದಿನಂತೆ ಸಾಗುತ್ತಿವೆ. ಪ್ರಸ್ತುತ ಟೋಲ್‌ನಲ್ಲಿ ವಾಹನದಟ್ಟಣೆ ಕಂಡುಬಂದಿಲ್ಲ.