ಸಿದ್ದಾಪುರ: ದೇಶದ ಪ್ರತಿಹಳ್ಳಿಗೂ ನೆಟವರ್ಕ್ ದೊರೆತಾಗ ಮಾತ್ರ ಡಿಜಿಟಲ್ ಇಂಡಿಯಾ ಕನಸು ಪೂರ್ಣವಾಗಲು ಸಾಧ್ಯ. 4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದ್ದು, ಇದನ್ನು ನನಸಾಗಿಸಲು ಬಿಎಸ್ಎನ್ಎಲ್ ಸಜ್ಜಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಸೊವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಕಾರೆಸಾಲನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ನಿರ್ವಣಗೊಂಡ ನೂತನ ಬಿಎಸ್ಎನ್ಎಲ್ ಟವರ್ ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಎಲ್ಲೆಲ್ಲಿ ನೆಟ್ವರ್ಕ್ ಕವರೇಜ್ ಇಲ್ಲವೋ ಅಂತಹ ಸ್ಥಳಗಳಲ್ಲಿ ಸಿಗ್ನಲ್ ದೊರೆಯಬೇಕೆಂಬುದು 4ಜಿ ಸ್ಯಾಚುರೇಶನ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ವರ್ಷದ ಕೊನೆಯಲ್ಲಿ ಇನ್ನು 50ಟವರ್ ಉದ್ಘಾಟನೆ ಮಾಡುವ ಗುರಿಯಿದೆ. ಬಿಎಸ್ಎನ್ಎಲ್ ಅನೇಕ ಟವರ್ ಅರಣ್ಯ ಪ್ರದೇಶದಲ್ಲಿರುವುದರಿಂದ ಟವರ್ ಕಟ್ಟಲು ಅರಣ್ಯ ಇಲಾಖೆಯಿಂದ ಜಾಗ ಮಂಜೂರಾಗಬೇಕಿದೆ. ಆರಂಭದಲ್ಲಿಯೇ ಸುಮಾರು 75ಕ್ಕಿಂತ ಹೆಚ್ಚು ಟವರ್ ನಿರ್ವಣಕ್ಕೆ ಫಾಸ್ಟ್ ಕ್ಲಿಯರೆನ್ಸ್ ಮಾಡಿಸಲಾಗಿದೆ ಎಂದರು.
ಕೆಲವು ಟವರ್ಗಳ ಕಾರ್ಯ ಡಿಎಫ್ಒ, ಕನ್ಸರ್ವೆಟರ್ ಹಾಗೂ ಅರಣ್ಯ ಇಲಾಖೆ ಮಟ್ಟದಲ್ಲಿ ಪ್ರಗತಿ ಹಂತದಲ್ಲಿದೆ. ಶೀಘ್ರದಲ್ಲೇ ಮುಗಿಸಲು ಅಧಿಕಾರಿಗಳ ಸಹಾಯದೊಂದಿಗೆ ಅಗತ್ಯ ಕೆಲಸ ಮಾಡುವುದಾಗಿ ತಿಳಿಸಿದರು.
ಎಜಿಎಂ ಸಂತೋಷಕುಮಾರ ಚೌಹಾಣ, ಅವಿನಾಶ ಪೂಜಾರಿ, ದೀಪಕ, ಗ್ರಾಪಂ ಉಪಾಧ್ಯಕ್ಷ ಗಿರೀಶ ಶೇಟ್, ಸದಸ್ಯ ಮೋಹನ ಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ತೋಟಪ್ಪ ನಾಯ್ಕ, ಗುರುರಾಜ ಶಾನಭಾಗ, ರಾಘವೇಂದ್ರ ಶಾಸ್ತ್ರಿ, ಆದರ್ಶ ಪೈ, ಮಾರುತಿ ನಾಯ್ಕ, , ಪ್ರಸನ್ನ ಹೆಗಡೆ, ಮಂಜುನಾಥ ಭಟ್ಟ, ಗಣಪತಿ ಗೌಡ, ಗಜಾನನ ಹೆಗಡೆ, ಸುರೇಶ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಇತರರಿದ್ದರು.