ಜಿಲ್ಲೆ

ಜೆಎಸ್‌ಎಸ್ ಮಹಿಳಾ ಪ.ಪೂ. ಕಾಲೇಜಿನಲ್ಲಿ ಫ್ಯಾಷನ್ ಶೋ

ಮೈಸೂರು: ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಪ್ರತಿಭಾ ದಿನಾಚರಣೆ ಆಯೋಜಿಸಲಾಗಿತ್ತು.

ಪ್ರತಿಭಾ ದಿನಾಚರಣೆಯ ಪ್ರಯುಕ್ತ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಫ್ಯಾಷನ್ ಶೋ ಮತ್ತು ಮಿಸ್ ಜೆಎಸ್‌ಎಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮಿಸ್ ಜೆಎಸ್‌ಎಸ್‌ಆಗಿ ಎಂ.ಸಂಗೀತಾ, ಮಿಸ್ ಫೋಟೋಜೆನಿಕ್ ಆಗಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಎಸ್.ವಿ.ಎಂ. ಅನುಶ್ರೀ, ಮಿಸ್ ಎಲೆಗಂಟ್ ಆಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಸರ್ಗ, ಮಿಸ್ ಜ್ಯುವೆಲಿಕ್‌ಆಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಐಶ್ವರ್ಯ ಬಿ. ಜಮಕಂಡಿ ಆಯ್ಕೆಗೊಂಡರು. ತೀರ್ಪುಗಾರರಾಗಿ ರೂಪದರ್ಶಿ ದರ್ಶಿನಿ ಯೋಗೇಶ್ ಕಾರ್ಯನಿರ್ವಹಿಸಿದರು.