ಲೋಕಾಪುರ ಸಮೀಪದ ದಾದನಟ್ಟಿ ಕೆರೆಗೆ ಸಚಿವ ಆರ್.ಬಿ. ತಿಮ್ಮಾಪೂರ ಬಾಗಿನ ಅರ್ಪಿಸಿದರು. ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಣ್ಣ ಕೊಪ್ಪದ, ವೆಂಕಣ್ಣಗೌಡ ಪೊಲೀಸ್‌ಪಾಟೀಲ ಇತರರಿದ್ದರು. 
ಜಿಲ್ಲೆ

ಕೆರೆ ತುಂಬಿದರೆ ರೈತರಿಗೆ ಅನುಕೂಲ

ಲೋಕಾಪುರ: ಮುಧೋಳ ಮತಕ್ಷೇತ್ರದಲ್ಲಿನ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸಲಾಗಿದ್ದು, ಇದರಿಂದ ಅಂತರ್ಜಲ ಹೆಚ್ಚಾಗಿ ರೈತರು ಫಲವತ್ತಾದ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಸಮೀಪದ ದಾದನಟ್ಟಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ಕೆರೆ, ಕಟ್ಟೆ, ಕಾಲುವೆಗಳು ನೀರು ತುಂಬಿದರೆ ಕುಡಿಯುವ ನೀರಿನ ಸಮಸ್ಯೆಯೂ ನೀಗುತ್ತದೆ. ಪೂರ್ವಜರು ನಿರ್ಮಿಸಿದ ಕೆರೆ ಕಟ್ಟೆಗಳನ್ನು ಮುಂದಿನ ಪೀಳಿಗೆಗೆ ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎಂದರು.

ಗ್ರಾಪಂ ಸದಸ್ಯ ವೆಂಕಣಗೌಡ ಪೋಲಿಸ್‌ಪಾಟೀಲ ಮಾತನಾಡಿ, ದಾದನಟ್ಟಿ ಕೆರೆಯನ್ನು ಹಲವಾರು ವಷರ್ಗಳಿಂದ ತುಂಬಿಸಿರಲಿಲ್ಲ. ಗ್ರಾಪಂ ಸದಸ್ಯರ, ರೈತ ಮುಖಂಡರ, ಸಾರ್ವಜನಿಕರ ಒತ್ತಾಯದಿಂದ ಸಚಿವರು ಮುತುವರ್ಜಿ ವಹಿಸಿ ನೀರು ತುಂಬಿಸಿ ಬಾಗಿನ ಅರ್ಪಿಸಿದ್ದಾರೆ ಎಂದರು.

ವರ್ಚಗಲ್ ಕೆರೆ ವೀಕ್ಷಿಸಿದ ಸಚಿವರು, ಕೆರೆಗಳ ಸುತ್ತ ಜನರಿಗೆ ವಾಯುವಾಹಿರಕ್ಕಾಗಿ, ಲೈಟಿಂಗ್ ಸಾರ್ವಜನಿಕರಿಗೆ ವಿಶ್ರಾಂತಿಗಾಗಿಬೆಂಚ್ ವ್ಯವಸ್ಥೆ ಇನ್ನಿತರ ಸೌಲಭ್ಯಗಳ ನಿರ್ಮಾಣಕ್ಕಾಗಿ ಒಂದು ಕೋಟಿ ರೂಗಳ ಅನುದಾನ ನೀಡಿದ್ದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ದಾದನಟ್ಟಿ ಗ್ರಾಮದ ಕೆರೆ ಅಭಿವೃದ್ಧಿಗೆ ಜಿರ್ಣೋದ್ಧಾರಕ್ಕಾಗಿ 10 ಲಕ್ಷ ರೂ. ಅನುದಾನ ಹಾಗೂ ಕಿಲ್ಲಾ ಹೊಸಕೋಟಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ದುರ್ಗಾದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ಹಳ್ಳಿ ಹಳ್ಳಿಯಲ್ಲೂ ವಿಶೇಷ ಸನ್ಮಾನ:ಜಿಲ್ಲೆಯ ಏಕೈಕ ಸಹಕಾರಿ ಕ್ಷೇತ್ರದ, ರೈತರ ಜೀವನಾಡಿಯಾದ ತಿಮ್ಮಾಪೂರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪುನರ್ ಜೀವನ ಕಲ್ಪಿಸಿ ಪ್ರಾರಂಭಿಸಲು ಮುತುವರ್ಜಿ ವಹಿಸಿ ಸರ್ಕಾರದಿಂದ 40 ಕೋಟಿ ರೂಗಳ ಬ್ಯಾಂಕ್ ಗ್ಯಾರಂಟಿ ನೀಡಿದ ಸಚಿವ ಆರ್.ಬಿ. ತಿಮ್ಮಾಪೂರ ಅವರನ್ನು ಪ್ರತಿ ಗ್ರಾಮದಲ್ಲೂ ರೈತರು ವಿಶೇಷವಾಗಿ ಸನ್ಮಾನಿಸಿದರು.

ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಣ್ಣ ಕೊಪ್ಪದ, ವೆಂಕಣ್ಣಗೌಡ ಪೊಲೀಸ್‌ಪಾಟೀಲ, ರಾಜೇಶ್ವರಿ ಶಿರೂರ, ಅರುಣ ಜೋಗನ್ನವರ, ವೆಂಕಣ್ಣ ಚಿಂಚಖಂಡಿ, ಹಣಮಂತ ಪರಮೇಶ್ವರ, ಗೋವಿಂದಪ್ಪ ದಾಸರ, ಗೋವಿಂದಪ್ಪ ವರ್ಚಗಲ್, ಬಿ.ಎಲ್. ಪೊಲೀಸ್‌ಪಾಟೀಲ, ವೆಂಕಣ್ಣ ಕಮಕೇರಿ, ದೇಸಾಯಿ ಡಂಗಿ, ಪಾಂಡಪ್ಪ ಕಮಕೇರಿ, ಕೃಷ್ಣಾ ಜಟ್ಟೆನ್ನವರ, ಶ್ರವಣಕುಮಾರ ಸೊಕನಾದಗಿ, ತಹಸೀಲ್ದಾರ್ ಮಹಾದೇವ ಸನಮುರಿ, ತಾಲೂಕುಮಟ್ಟದ ಅಧಿಕಾರಿಗಳಾದ ಇಒ ಉಮೇಶ ಸಿದ್ನಾಳ, ಮಹಹಮ್ಮದ್ ಹನೀಫ್ ತಹಸೀಲ್ದಾರ್, ಮಹೇಶ ದಂಡನ್ನವರ ಇತರರಿದ್ದರು.