ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿಗೆ ಕರವೇ (ಸ್ವಾಭಿಮಾನಿ ಸೇನೆ) ಮನವಿ ಸಲ್ಲಿಸಿತು.ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಗ್ರಾಮ ಘಟಕದ ಅಧ್ಯಕ್ಷ ದುರುಗಪ್ಪ ಸುರಪುರ, ಗೌರವಾಧ್ಯಕ್ಷ ಪ್ರಭುಗೌಡ, ಭೀಮಣ್ಣ ಮ್ಯಾಕಲದೊಡ್ಡಿ ಇತರರಿದ್ದರು. 
ಜಿಲ್ಲೆ

ರೈತರ ಅನುಕೂಲಕ್ಕಾಗಿ ಕ್ರಮವಹಿಸಿ

Kopala - Desk - Eraveni

ಲಿಂಗಸುಗೂರು: ತಾಲೂಕಿನ ಪೈದೊಡ್ಡಿ ಗ್ರಾಪಂ ವ್ಯಾಪ್ತಿಯ ಹೊಲಗಳಿಗೆ ಹೋಗಲು ಕಾಲುದಾರಿ ಬಿಡುವಂತೆ ಒತ್ತಾಯಿಸಿ ಕರವೇ ( ಸ್ವಾಭಿಮಾನಿ ಸೇನೆ) ನೇತೃತ್ವದಲ್ಲಿ ರೈತರು ಶುಕ್ರವಾರ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಲಾಯಿತು.

ತಿಮ್ಮಪ್ಪ ಎನ್ನುವ ರೈತನ ಸರ್ವೇ ನಂ. 49 ಹಿಸ್ಸಾ 2/3ರ ಜಮೀನಿನಲ್ಲಿ ಮೊದಲಿದ್ದ ಕಾಲುದಾರಿಯಲ್ಲಿ ರೈತರು ಜಮೀನುಗಳಿಗೆ ತೆರಳುತ್ತಿದ್ದು, ಈ ದಾರಿಯನ್ನು ತಿಮ್ಮಪ್ಪ ಬಂದ್ ಮಾಡಿದ್ದಾರೆ. ಇದರಿಂದ ತೊಂದರೆಯಾಗಿದೆ. ಕಂದಾಯ ಇಲಾಖೆ ದಾಖಲೆಯಲ್ಲಿ ಬಂಡಿದಾರಿ ಎಂದು ನಮೂದಿಸಿದ್ದರೂ ಪೈದೊಡ್ಡಿ ಹಾಗೂ ಗೋಲಪಲ್ಲಿ ಗ್ರಾಮಗಳ ರೈತರಿಗೆ ದಾರಿ ಇಲ್ಲದಂತಾಗಿದೆ. ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಿಗೆ ಹೋಗಲು ತೊಂದರೆಯಾಗಿದೆ. ದ್ವಿಚಕ್ರ ವಾಹನಗಳ ಓಡಾಟಕ್ಕೂ ತಿಮ್ಮಪ್ಪ ಎನ್ನುವ ರೈತ ಬಿಡುತ್ತಿಲ್ಲ.

ಇದ್ದ ದಾರಿ ಬಂದ್ ಮಾಡಿದ್ದರಿಂದ ಸಮಸ್ಯೆಯಾಗಿದ್ದು, ಸೂಕ್ತ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಕರವೇ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಗ್ರಾಮ ಘಟಕದ ಅಧ್ಯಕ್ಷ ದುರುಗಪ್ಪ ಸುರಪುರ, ಗೌರವಾಧ್ಯಕ್ಷ ಪ್ರಭುಗೌಡ, ಪ್ರಮುಖರಾದ ಮುದುಕಪ್ಪ, ಭೀಮಣ್ಣ ಮ್ಯಾಕಲದೊಡ್ಡಿ, ಶರಣಬಸವ, ಗೋಪಾಲ, ಶಿವಣ್ಣ, ಬಸ್ಸಯ್ಯ, ತಿಮ್ಮಣ್ಣ ಇದ್ದರು.