ಸಿರಗುಪ್ಪ ತಾಲೂಕಿನ ಬಾಗೇವಾಡಿ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಿಂದ ಬಾಗೇವಾಡಿ ಕಾಲುವೆಗೆ 150ಕ್ಯೂಸೆಕ್ ನೀರು ಹರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು. ತೆಕ್ಕಲಕೋಟೆ ಸಿಪಿಐ ಸಿ.ಎಚ್.ಸುಂದರೇಶ, ಎಇಇ ಮಂಜುನಾಥ, ತಿಪ್ಪೇಸ್ವಾಮಿ, ಸುರೇಶ್ ಪೂಜಾರಿ, ರೈತ ಮುಖಂಡರಾದ ಮಲ್ಲಿಕಾರ್ಜುನ ಇದ್ದರು. 
ಜಿಲ್ಲೆ

ನೀರಿಗಾಗಿ ಬಾಗೇವಾಡಿ ಕಾಲುವೆ ರೈತರ ಹೋರಾಟ

Gangavati - Mohan Kumar H R

ಸಿರಗುಪ್ಪ: ತಾಲೂಕಿನ ಬಾಗೇವಾಡಿ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಿಂದ ಬಾಗೇವಾಡಿ ಕಾಲುವೆಗೆ 150 ಕ್ಯೂಸೆಕ್ ನೀರು ಹರಿಸುವಂತೆ ಒತ್ತಾಯಿಸಿ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಮೇಲೆ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಸೋಮವಾರ ಪ್ರತಿಭಟನೆ ನಡೆಸಿದರು.

150 ಕ್ಯೂಸೆಕ್ ನೀರು ಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಬಾಗೇವಾಡಿ ಕಾಲುವೆಯ ನೀರಾವರಿ ಇಲಾಖೆ ಅಧಿಕಾರಿಗಳು ರೈತರಿಗೆ ಶನಿವಾರ ಭರವಸೆ ನೀಡಿದ್ದರು. ಆದರೆ, ಕೇವಲ 110 ಕ್ಯೂಸೆಕ್ ನೀರನ್ನು ಕಾಲುವೆಗೆ ಹರಿಸುತ್ತಿರುವುದರಿಂದ ಬಾಗೇವಾಡಿ ಕಾಲುವೆಯ ಕೊನೇ ಭಾಗದ ರೈತರ ಹೊಲಗಳಿಗೆ ನೀರು ಮುಟ್ಟುತ್ತಿಲ್ಲ. ಆದ್ದರಿಂದ 150 ಕ್ಯೂಸೆಕ್ ನೀರನ್ನು ಹರಿಸಬೇಕೆಂದು ಬಾಗೇವಾಡಿ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತೆಕ್ಕಲಕೋಟೆ ಸಿಪಿಐ ಸಿ.ಎಚ್.ಸುಂದರೇಶ ಮತ್ತು ಎಇಇ ಮಂಜುನಾಥ, ತಿಪ್ಪೇಸ್ವಾಮಿ, ಸುರೇಶ್ ಪೂಜಾರಿ ರೈತರೊಂದಿಗೆ ಚರ್ಚಿಸಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ 150 ಕ್ಯೂಸೆಕ್ ನೀರು ಹರಿಸಿದರೆ ಮಾತ್ರ ಪ್ರತಿಭಟನೆ ಕೈಬಿಡುತ್ತೇವೆ. ಇಲ್ಲದಿದ್ದರೆ, ಪ್ರತಿಭಟನೆಯನ್ನು ಮುಂದುವರಿಸುವುದಾಗಿ ರೈತರು ಪಟ್ಟು ಹಿಡಿದರು.

ಬಳಿಕ ಸಿಪಿಐ ಸಿ.ಎಚ್. ಸುಂದರೇಶ್ ಮತ್ತು ನೀರಾವರಿ ಇಲಾಖೆ ಎಇಇ ಸುರೇಶ್ ಪೂಜಾರಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಾಗೇವಾಡಿ ಕಾಲುವೆಗೆ 150 ಕ್ಯೂಸೆಕ್ ನೀರನ್ನು ಹರಿಸಿದ ಬಳಿಕ ರೈತರ ಪ್ರತಿಭಟನೆ ಹಿಂಪಡೆದರು.

ರೈತ ಮುಖಂಡರಾದ ಮಲ್ಲಿಕಾರ್ಜುನ, ಜ್ಞಾನಾನಂದಸ್ವಾಮಿ, ಕೊಮಾರೆಪ್ಪ, ಮಾಬುಸುಬಾನಿ, ಯು.ನಾಗೇಂದ್ರ, ರಾಜಪ್ಪ, ಜಿ.ಮಲ್ಲಿಕಾರ್ಜುನ, ಮಹಾಂತಯ್ಯಸ್ವಾಮಿ, ಮಂಜುನಾಥ, ಉಸ್ಮಾನ್ ಇತರರಿದ್ದರು.