ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ 97ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಲಾಯಿತು. ಡಾ.ಗಿರೀಶ ಮರಡ್ಡಿ, ಡಾ.ಮಂಜುನಾಥ ಚೌರಡ್ಡಿ, ಡಾ.ಎಸ್.ಎಸ್. ಹಿರೇಮಠ, ಎಸ್.ಎಂ.ವಾರದ, ಜಿ.ಬಿ.ವಿಶ್ವನಾಥ, ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ ಇದ್ದರು. 
ಜಿಲ್ಲೆ

ರೈತರು ಮಣ್ಣಿನ ಸಂರಕ್ಷಣೆ ಮಾಡಲಿ

ಶಂಕರ ಗೆಜ್ಜಿ

ಬೆಳಗಾವಿ: ರೈತರು ಮಣ್ಣಿನ ಸಂರಕ್ಷಣೆ ಮಾಡುತ್ತ ಉಳುಮೆ ಮಾಡಬೇಕು ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಡಾ.ಗಿರೀಶ ಮರಡ್ಡಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ 97ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ್ದ ಧಾರವಾಡ ಕೃಷಿ ವಿವಿ ಕೀಟಶಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ ಹೊಸಮನಿ, ಅಂತರಿಕ್ಷ ಯಾನದಲ್ಲಿ ಕೃಷಿಗೆ ಸಂಬಂಧಪಟ್ಟ ಸಂಶೋಧನೆಗಳ ಬಗ್ಗೆ ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಮಾತನಾಡಿದರು.

ದಿನಾಚರಣೆಯ ಭಾಗವಾಗಿ ಕೇಂದ್ರದಲ್ಲಿ ಕೃಷಿ ತಂತ್ರಜ್ಞಾನ ಪ್ರದರ್ಶನ ವ್ಯವಸ್ಥೆ ಮಾಡಲಾಯಿತು. ಸಿರಿಧಾನ್ಯಗಳ ವೌಲ್ಯವರ್ಧನೆಯ ಉತ್ಪನ್ನ, ನೈಸರ್ಗಿಕ ಕೃಷಿ ಪರಿಕರ, ವಿವಿಧ ಸುಧಾರಿತ ತಳಿ ಬೀಜಗಳು, ಜೈವಿಕ ಗೊಬ್ಬರ, ಎರೆಜಲ, ದೇಸಿ ತಳಿಯ ತರಕಾರಿ ಬೀಜಗಳು, ಗುಣಮಟ್ಟದ ಹಣ್ಣು ಬೆಳೆಗಳ ಸಸಿ, ಸಸ್ಯ ಸಂರಕ್ಷಣಾ ಕೀಟ ಹಾಗೂ ಪೀಡೆನಾಶಕಗಳ ಪರಿಚಯ ಮಾಡಲಾಯಿತು. ಜಮೀನುಗಳಲ್ಲಿ ಮತ್ತು ಸಮುದಾಯ ಸ್ಥಳಗಳಲ್ಲಿ ಸಸಿ ನೆಡುವುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ಕೇಂದ್ರದ ವಿಜ್ಞಾನಿಗಳಾದ ಡಾ.ಎಸ್.ಎಸ್.ಹಿರೇಮಠ, ಎಸ್.ಎಂ.ವಾರದ, ಜಿ.ಬಿ.ವಿಶ್ವನಾಥ, ಪ್ರವೀಣ ಯಡಹಳ್ಳಿ, ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಇದ್ದರು. 130ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.