ಮದ್ದೂರು ತಾಲೂಕಿನ ಕೆಸ್ತೂರಿನ ಬ್ಯಾಂಕ್ ಆಫ್ ಬರೋಡ ಶಾಖೆ ಮುಂದೆ ರೈತ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ಸದಸ್ಯರು ಪ್ರತಿಭಟನೆ ನೆಡೆಸಲಾಯಿತು. ನಂಜುಂಡಯ್ಯ, ವೆಂಕಟೇಗೌಡ, ಪ್ರಭುಲಿಂಗ, ಅಣ್ಣೂರು ಮಹೇಂದ್ರ, ಸೊ.ಸಿ. ಪ್ರಕಾಶ್ ಇದ್ದರು. 
ಜಿಲ್ಲೆ

ಬಿಒಬಿ ಕೆಸ್ತೂರು ಶಾಖೆಗೆ ರೈತರ ಮುತ್ತಿಗೆ

ಮದ್ದೂರು: ಬ್ಯಾಂಕ್‌ನ ವ್ಯವಸ್ಥಾಪಕರು ರೌಡಿಗಳನ್ನು ಬಿಟ್ಟು ಬೆದರಿಸಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕೆಸ್ತೂರಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ರೈತ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ಸದಸ್ಯರು ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಬ್ಯಾಂಕ್‌ನ ಮ್ಯಾನೇಜರ್ ಶ್ರೀಕಾಂತ್ ಅವರು ಕೆಸ್ತೂರಿನ ಪೂರ್ಣಿಮಾ ವಸಂತ್ ಕುಮಾರ್ ಅವರ ಮನೆಗೆ ರೌಡಿಗಳನ್ನು ಕಳುಹಿಸಿ ಬ್ಯಾಂಕ್‌ಗೆ ಹಣ ಕಟ್ಟದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿಸಿದ್ದಾರೆ ಎಂದು ಆರೋಪಿಸಿದರು.

ವ್ಯವಸ್ಥಾಪಕನ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಬ್ಯಾಂಕ್‌ನ ವ್ಯವಸ್ಥಾಪಕ ಶ್ರೀಕಾಂತ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಶ್ರೀಕಾಂತ್ ಮಾತನಾಡಿ, ತಪ್ಪಾಗಿದೆ ಇನ್ನು ಮುಂದೆ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ರೈತರನ್ನು ಸಮಾಧಾನಪಡಿಸಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ರೈತ ಮುಖಂಡರಾದ ವೆಂಕಟೇಗೌಡ, ಪ್ರಭುಲಿಂಗ, ಅಣ್ಣೂರು ಮಹೇಂದ್ರ, ಸೊ.ಸಿ. ಪ್ರಕಾಶ್ ಇತರು ಇದ್ದರು.