ಜಿಲ್ಲೆ

ರೈತರು ಸಾವಯವ ಗೊಬ್ಬರ ಬಳಸಲಿ

ಮುರಗೋಡ: ಪ್ರಸ್ತುತ ದಿನಗಳಲ್ಲಿ ಅಧಿಕ ರಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಲವತ್ತತೆ ಕಡಿಮೆ ಆಗುತ್ತಿದ್ದು, ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ಆರ್ಥಿಕವಾಗಿ ಸಬಲರಾಗಬೇಕು ಎಂದು ತೋಟಗಾರಿಕೆ ತ ಎಂ.ಸಿ.ಮಠದ ಹೇಳಿದರು.

ಸ್ಥಳಿಯ ಸದಾನಂದ ಅಳಾಜ ಅವರ ತೋಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ಸಮ್ಮೇಳನದ ತೋಟಗಾರಿಕೆ ಬೆಳೆಗಳ ಚರ್ಚಾಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, ರೈತರು ಸುಧಾರಿತ ಕೃಷಿ ಕ್ರಮ ಅನುಸರಿಸಿದ್ದಲ್ಲಿ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಸಲಹೆ ನೀಡಿದರು. ಕಲಬುರಗಿಯ ಸವಿತಾನಂದನಾಥ ಸ್ವಾಮೀಜಿ ಮಾತನಾಡಿ, ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯೊಟ್ಟಿಗೆ ತಜ್ಞರ ಸಲಹೆ ಪಡೆಯಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಲಕ್ಷ$್ಮ್ಮಣ ಹಿಡಕಲ, ಧಾರವಾಡದ ಕೃವಿವಿ ಡಾ. ಶಾಲಿನಿ ಹುಯಿಲಗೋಳ, ಗಂಗಪ್ಪ ಗಾಣಿಗೇರ, ಪ್ರಗತಿಪರ ರೈತ ವರ್ದಮಾನ ಸಂಗೊಳ್ಳಿ, ಸವಿತಾ ಅಳಾಜ, ವಾಗೇಶ ಮಲ್ಲನಗೌಡರ, ಶ್ರೀಕಾಂತ ನಾಯಿಕ, ವಸಂತರಾವ ಪಾಟೀಲ, ಮರೆಪ್ಪ ಮೇದಾರ, ವೀರೇಶ ಹೊನ್ನಿಹಾಳ, ದುಂಡಯ್ಯ ಹಿರೇಮಠ, ಸದಾನಂದ ಅಳಾಜ, ಎಂ.ಎಸ್​.ಕೋಳಿ, ನಿಂಗಣ್ಣ ಬೀರನಗಡ್ಡಿ, ರುಪೇಶ ಕಾಮತ ಇತರರಿದ್ದರು. ಗಿರೀಶ ಅಳಾಜ ನಿರೂಪಿಸಿದರು.