ಢವಳಗಿ ಸಮೀಪದ ಸಿದ್ದಾಪುರ ಪಿ.ಟಿ.ಗ್ರಾಮದ ಬಾಪುಗೌಡ ಪಾಟೀಲರ ಹೊಲದಲ್ಲಿ ವಿಜಯಪುರದ ಹಿಟ್ನಳ್ಳಿ ಕೃಷಿ ಕಾಲೇಜಿನ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಮಣ್ಣಿನ ಫಲವತ್ತತೆ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಕಿಶನ ಪವರ್​, ಡಾ.ಎಸ್​.ಜಿ.ಅಸ್ಕಿ, ಸಚಿನ ಸಿದ್ನಾಳ, ಸುನೀಲ ಕರಂಜೆ ಇತರರಿದ್ದರು. 
ಜಿಲ್ಲೆ

ರೈತರು ಮಣ್ಣಿನ ಫಲವತ್ತತೆಗೆ ಜೀವಾಮೃತ ಬಳಸಲು ಮುಂದಾಗಲಿ

ಗಿರೀಶ ಸಗರ

ಢವಳಗಿ: ಸಮೀಪದ ಸಿದ್ದಾಪುರ ಪಿ.ಟಿ.ಗ್ರಾಮದ ಬಾಪುಗೌಡ ಪಾಟೀಲ ಅವರ ಹೊಲದಲ್ಲಿ ವಿಜಯಪುರದ ಹಿಟ್ನಳ್ಳಿ ಕೃಷಿ ಕಾಲೇಜಿನ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಮಣ್ಣಿನ ಫಲವತ್ತತೆಯ ಪ್ರಾತ್ಯಕ್ಷಿಕೆಯನ್ನು ಕಾರ್ಯಾನುಭವದ ಶಿಬಿರದಲ್ಲಿ ಪ್ರದರ್ಶನ ಮಾಡಿದರು.

ವಿದ್ಯಾರ್ಥಿ ಕಿಶನ ಪವರ್​ ಮಾತನಾಡಿ, ಜೀವಾಮೃತದ ಉಪಯೋಗಗಳ ಕೃಷಿ ವಿದ್ಯಾರ್ಥಿಗಳು ರೈತರಿಗೆ ವಿವರಿಸಿದರು. ಮಣ್ಣಿನ ಫಲವತ್ತತೆ ಹೆಚ್ಚುತ್ತದೆ,ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಬಹುದು, ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚುತ್ತದೆ. ಲು ಪೋಷಾಂಶಗಳನ್ನು ಹೆಚ್ಚಿಸುತ್ತದೆ ಎಂದು ಮಾಹಿತಿ ನೀಡಿದರು.

ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ಎಸ್​.ಜಿ.ಅಸ್ಕಿ ಅವರ ಉಪಸ್ಥಿತಿಯಲ್ಲಿ ಜೀವಾಮೃತ ತಯಾರಿಸುವ ವಿಧಾನವನ್ನು ವಿದ್ಯಾರ್ಥಿಗಳಾದ ಸಚಿನ ಸಿದ್ನಾಳ, ಸುನೀಲ ಕರಂಜೆ, ಶರಣಗೌಡ ಮಾಲಿಪಾಟೀಲ, ರಾಜಶೇಖರ ಬಿರಾದಾರ, ಕೃಷ್ಣಾ ಖಾಸನಿಸ ಇತರರು ರೈತರು ಹಾಗೂ ರೈತ ಮಹಿಳೆಯರ ಮುಂಭಾಗ ಪ್ರದರ್ಶ ಮಾಡಿದರು.