ವಿಜಯಪುರ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮವನ್ನು ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಹಿರಿಯ ವಿಜ್ಞಾನಿ ಡಾ.ಶುಭಾ. ಎಸ್ ಮತ್ತಿತರರಿದ್ದರು. 
ಜಿಲ್ಲೆ

ರೈತರು ಸಮಗ್ರ ಕೃಷಿ ಅನುಸರಿಸಲಿ

Bellari - Heera Nayak

ವಿಜಯಪುರ : ಕೃಷಿಯಲ್ಲಿ ಆದಾಯ ದ್ವಿಗುಣ ಹಾಗೂ ಸುಸ್ಥಿರತೆ ಸಾಧಿಸಬೇಕಾದರೆ ರೈತರು ಬೆಳೆ ಆಧಾರಿತ ಸಮಗ್ರ ಕೃಷಿಯನ್ನು ಅಳವಡಿಸಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಕೃ ಅನುಸಂಧಾನ ಪರಿಷತ್ತು ದೇಶದೆಲ್ಲೆಡೆ ತನ್ನ ಕೃಷಿ ಮತ್ತು ಕೃಷಿ ಸಂಬಂಧಿತ ಅಂಗ ಸಂಸ್ಥೆಗಳನ್ನು ಹೊಂದಿದ್ದು, ಅವುಗಳ ಮೂಲಕ ಕೃಷಿ ಶಿಕ್ಷಣ ಹಾಗೂ ಆಯಾ ಪ್ರದೇಶ ಹಾಗೂ ವಾತಾವರಣಕ್ಕೆ ಸೂಕ್ತವಾಗುವ ತಳಿ ಅಭಿವೃದ್ಧಿ ಮಾಡಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಶ್ರಮಿಸುತ್ತಿದೆ ಎಂದರು.

ಪ್ರತಿವರ್ಷ ಕೃಷಿ ಕ್ಷೇತ್ರದಲ್ಲಾಗುವ ಬದಲಾವಣೆಗಳ ಕುರಿತು ಸಂಸ್ಥಾಪನೆಯ ದಿನ ಚಿಂತನ-ಮಂಥನ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೂಪುರೇಷೆಗಳನ್ನು ರೂಪಿಸಲಾಗುವುದೆಂದರು.

ದೇಶದಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳಿಗೆ ಶೇ.100 ರಷ್ಟು ಅನುದಾನವನ್ನು ಭಾರತೀಯ ಕೃಷಿ ಅನುಸಂದಾನ ಪರಿಷತ್ತು ನೀಡಿ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಶುಭಾ. ಎಸ್ ಮಾತನಾಡಿ, ಕೃಷಿಯಲ್ಲಿ ಆದಾಯ ದ್ವಿಗುಣಗೊಳಿಸಿ ಯಶಸ್ವಿಯಾದ ರೈತರ ಅನುಭವಗಳನ್ನು ಮತ್ತು ಆಧುನಿಕ ಕೃಷಿ ತಾಂತ್ರಿಕತೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು, ಸಿಬ್ಬಂದಿ, ರೈತರು ಹಾಗೂ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.