ಜಿಲ್ಲೆ

ರೈತರು ಮಣ್ಣಿನ ಫಲವತ್ತತೆಗೆ ಒತ್ತು ನೀಡಿ

ಕೋಲಾರ ಡೆಸ್ಕ್

ಬಂಗಾರಪೇಟೆ: ಅಂಕಿ ಅಂಶಗಳ ಪ್ರಕಾರ ಕೋಲಾರ ಜಿಲ್ಲೆಯ ಮಣ್ಣಿನಲ್ಲಿ ಇರಬೇಕಾದ ಸಾವಯವ, ಸೂಕ್ಷಾ$್ಮಣು ಜೀವಿಗಳು ನಶಿಸಿ ಹೋಗಿರುವ ಕಾರಣ ಮಣ್ಣಿನ ಫಲವತ್ತತೆ ಹಾಳಾಗಿದೆ. ಆದ್ದರಿಂದ ಮಣ್ಣಿನ ಫಲವತ್ತತೆಗೆ ರೈತರು ಹೆಚ್ಚಿನ ಒತ್ತು ನೀಡಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಭಾ ಹೇಳಿದರು.

ಪಟ್ಟಣದ ಕೃಷಿಕ ಸಮಾಜದ ಆವರಣದಲ್ಲಿ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿ ಇದ್ದಾರೆ ಎಂದು ಭಾವಿಸುತ್ತೇವೆ. ಅವರನ್ನು ಸ್ಮರಿಸುವ ಸಲುವಾಗಿ ಒಂದು ದಿನ ಮುಡುಪಾಗಿ ಇಡಬೇಕು ಎಂಬ ಉದ್ದೇಶದಿಂದ ಡಿ.23ರಂದು ರೈತರ ದಿನ ಆಚರಿಸಲಾಗುತ್ತಿದೆ ಎಂದರು.

ಸೂಕ್ಷ$್ಮ ನೀರಾವರಿ ಯೋಜನೆಯ ಮೂಲಕ ಎಲ್ಲ ವರ್ಗದ ರೈತರಿಗೂ ಶೇ.90 ರಿಯಾಯಿತಿಯಲ್ಲಿ ಹನಿ ನೀರಾವರಿ ಪೈಪ್​ಗಳು ವಿತರಿಸಲಾಗುತ್ತಿದೆ. ಕೃಷಿ ಯಂತ್ರೀಕರಣ ಯೋಜನೆಯಲ್ಲಿ ಕುಡುಗೋಲಿನಿಂದ ಟ್ರ್ಯಾಕ್ಟರ್​ವರೆಗೂ ಅನುದಾನ ಆಧಾರದ ಮೇಲೆ ರಿಯಾಯಿತಿಯಲ್ಲಿ ವಿತರಣೆ ಮಾಡಲಾಗುತ್ತದೆ. ಸದ್ಯದಲ್ಲೇ ಹಿಂಗಾರು ಬೆಳೆ ಸಮೀಕ್ಷೆ ಆರಂಭವಾಗುತ್ತಿದ್ದು, ಎಲ್ಲ ರೈತರು ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು. ಸಮೀಕ್ಷೆಗಾಗಿ ಇಲಾಖೆೆಯಿಂದ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ ಎಂದರು.

ಕೃಷಿ ಚಟುವಟಿಕೆಗಳಲ್ಲಿ ರೈತ ತೊಡಗಿದ್ದಾಗ ಹಾವು ಕಚ್ಚುವುದರಿಂದ ಮೃತಪಟ್ಟರೆ ಜಂಟಿ ಸಮೀಕೆ ನಡೆಸಿ 2 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗುತ್ತದೆ. ರೈತರು ಸಾಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟರೆ ಕೃಷಿ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಹುಲ್ಲಿನ ಮೇದೆ ಆಕಸ್ಮಿಕವಾಗಿ ಸುಟ್ಟುಹೋದರೆ ಅದಕ್ಕೂ ಸಹ ಪರಿಹಾರ ನೀಡಲಾಗುತ್ತದೆ ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ರಾಜಾರೆಡ್ಡಿ ಮಾತನಾಡಿ, ದೇಶವು ಸರ್ವತೋಮುಖ ಅಭಿವೃದ್ಧಿ ಕಾಣಬೇಕಾದರೆ ಕೇವಲ ಯಾಂತ್ರಿಕೃತ ಯಂತ್ರೋಪಕರಣಗಳಿಂದ ಸಾಧ್ಯವಾಗುವುದಿಲ್ಲ. ಬದಲಾಗಿ ರೈತರಿಗೆ ಬೆನ್ನೆಲುಬಾಗಿ ನಿಂತು ಯೋಜನೆಗಳನ್ನು ರೂಪಿಸಬೇಕು ಅದರ ಮೂಲಕ ಆರ್ಥಿಕ ಸದೃಢರನ್ನಾಗಿ ಮಾಡಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು.

ಸಹಾಯಕ ತೋಟಗಾರಿಕಾ ಅಧಿಕಾರಿ ನವೀನಾ ಕುಮಾರಿ, ಕೃಷಿ ಅಧಿಕಾರಿಗಳಾದ ನಾರಾಯಣರೆಡ್ಡಿ, ವಿಜಯಕುಮಾರ್​, ರೈತ ಸಂಘದ ಮುಖಂಡ ರಾಮೇಗೌಡ ಇದ್ದರು.