ಶಿಗ್ಗಾಂವಿ: ಗ್ರಾಮ ನಕಾಶೆಯಲ್ಲಿ ದಾಖಲಾಗಿರುವ ರಸ್ತೆಗಳನ್ನು ಮರು ಸರ್ವೆ ಮೂಲಕ ರಸ್ತೆ ಅಭಿವೃದ್ಧಿಪಡಿಸಲು ಸರ್ಕಾರ ಸೂಚಿಸಿದೆ. ಹೀಗಾಗಿ ರೈತರು ರಸ್ತೆ ಕಾಮಗಾರಿ ನಡೆಸುವ ನಡೆಸುವಾಗ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ರವಿಕುಮಾರ ಕೊರವರ ಹೇಳಿದರು.
ತಾಲೂಕಿನ ಗಂಗೇಬಾವಿಯಲ್ಲಿ ಗುರುವಾರ ಹೊಸೂರು, ಗಂಗ್ಯಾನೂರು ಗ್ರಾಮದ ರೈತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಅಸಹಕಾರ ವ್ಯಕ್ತಪಡಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ತಹಸೀಲ್ದಾರರಿಗೆ ಅಧಿಕಾರ ಇದೆ. ರೈತರೂ ರಸ್ತೆ ಅಭಿವೃದ್ಧಿ ಕೆಲಸಗಳಿಗೆ ತಕರಾರು ಮಾಡದೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಎಂ.ಎಂ. ಪಠಾಣ ಮಾತನಾಡಿ, ಹೊಲಗಳಿಗೆ ಹೋಗುವ ರಸ್ತೆ ಕಾಮಗಾರಿ ಕೈಗೊಳ್ಳುವಾಗ ಎಲ್ಲ ರೈತರು ರ್ಚಚಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ತಕರಾರು ಆಗದಂತೆ ನಿಮ್ಮ ಕೆಲಸ ಮಾಡಿಕೊಳ್ಳಬೇಕು. ತಹಸೀಲ್ದಾರ್ ಅವರ ಪ್ರಯತ್ನದಿಂದ ನೂರಾರು ರೈತರ ಸಂಚಾರಕ್ಕೆ ರಸ್ತೆ ನಿರ್ವಣವಾಗಿದೆ ಎಂದರು.
ಹೊಸೂರು ಗ್ರಾಮದ ಸರ್ವೆ ನಂ. 224/ಅ ವ್ಯಾಪ್ತಿಯಲ್ಲಿನ ನೂರಾರು ರೈತರು, ತಮ್ಮ ಹೊಲ-ಗದ್ದೆಗಳಿಗೆ ಹೋಗಲು ಸಂಚಾರಕ್ಕೆ ರಸ್ತೆ ನಿರ್ವಿುಸಿಕೊಡಲು ಕಳೆದ ಐದು ವರ್ಷಗಳಿಂದ ತಹಸೀಲ್ದಾರ್ ಕಚೇರಿಗೆ ಅರ್ಜಿ ಕೊಟ್ಟು ನಿತ್ಯ ಅಲೆದಾಡುತ್ತಿದ್ದರೂ ಈ ಹಿಂದಿನ ತಹಸೀಲ್ದಾರರು ಸ್ಪಂದಿಸಿರಲಿಲ್ಲ.
ಶಾಸಕ ಯಾಸೀರಖಾನ್ ಪಠಾಣ ಅವರ ಸಹಕಾರ, ವಿವಿಧ ರೈತ ಸಂಘಟನೆಗಳ ಮುಖಂಡರ ಬೆಂಬಲ ಪಡೆದು ತಹಸೀಲ್ದಾರ್ ರವಿಕುಮಾರ ಕೊರವರ, ಕಾಂಗ್ರೆಸ್ ಮುಖಂಡ ಎಂ.ಎಂ. ಪಠಾಣ ಅವರ ಮಧ್ಯಸ್ಥಿಕೆಯಲ್ಲಿ ಖಾಸಗಿಯಾಗಿ ಭೂಮಾಲೀಕರ ಮನವೊಲಿಸಿ ಮಾಲ್ಕಿ ಜಾಗದಲ್ಲೇ ನೂರಾರು ರೈತರು ತಮ್ಮ ಹೊಲಗಳಿಗೆ ಹೋಗಲು ರಸ್ತೆ ನಿರ್ವಿುಸಿಕೊಟ್ಟಿದ್ದಕ್ಕೆ ರೈತ ಮುಖಂಡರು, ರೈತರು ತಹಸೀಲ್ದಾರ್ ಅವರನ್ನು ಸನ್ಮಾನಿಸಿದರು.
ಕಂದಾಯ ನಿರೀಕ್ಷಕ ಐ.ಎಂ. ಪಾಟೀಲ, ಬಸಯ್ಯ ಗೌರಿಮಠ, ಎಸ್.ಎಂ. ಬರದೂರ, ಮುತ್ತಣ್ಣ ಗುಡಗೇರಿ, ಈರಣ್ಣ ಸಮಗೊಂದ, ಬಸಲಿಂಗಪ್ಪ ನರಗುಂದ, ನಿಂಗಣ್ಣ ಬೆಂಚಲ್ಲಿ, ವೀರಣ್ಣ ಪಾಟೀಲ, ವಿವಿಧ ರೈತ ಮುಖಂಡರು, ರೈತರು ಕಾರ್ಯಕ್ರಮದಲ್ಲಿದ್ದರು.