ಜಿಲ್ಲೆ

ರೈತರು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲಿ

ಬಸವರಾಜ ವೀರಪ್ಪ ಗರಗ

ಹೊನ್ನಾವರ: ದೇಶಕ್ಕೆ ಆರ್ಥಿಕ ಶಕ್ತಿ ತುಂಬುವ ರೈತರ ಜೀವನ ಕಷ್ಟದಲ್ಲಿದೆ. ಸರ್ಕಾರವು ರೈತರಿಗೆ ಅನುಕೂಲವಾದ ಹಲವು ಯೋಜನೆ ಜಾರಿಗೊಳಿಸಿದೆ. ರೈತರು ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಶ್ರಯದಲ್ಲಿ ಪಟ್ಟಣದ ಕೃಷಿ ಇಲಾಖೆ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ರೈತರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಚಿವ ಮಂಕಾಳ ವೈದ್ಯ, ಸೇವಾ ನಿವೃತ್ತಿಯಾಗುತ್ತಿರುವ ಜಿ.ಪಂ. ಯೋಜನಾಧಿಕಾರಿ ವಿನೇದ ಅನ್ವೇಕರ್ ಹಾಗೂ ಆತ್ಮ ಯೋಜನೆಯಡಿ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿ ಶಿರಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಅರ್ಜುನ ಸೂಲಗಿತ್ತಿ ರೈತರಿಗೆ ತರಬೇತಿ ನೀಡಿದರು.

ರೈತ ಸಂಘದ ತಾಲೂಕಾಧ್ಯಕ್ಷ ಅರುಣ ನಾಯ್ಕ, ಭಾರತೀಯ ಕಿಸಾನ ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ.ಎಂ. ನಾಯ್ಕ, ತಾಪಂ ಇಒ ಚೇತನಕುಮಾರ, ಸಹಾಯಕ ಕೃಷಿ ನಿರ್ದೆಶಕ ಪಾಂಡಪ್ಪ ಲಂಬಾಣಿ, ಕೃಷಿ ಅಧಿಕಾರಿ ಪುನೀತಾ ಎಸ್.ಬಿ., ತೋಟಗಾರಿಕೆ ಇಲಾಖೆ ಅಧಿಕಾರಿ ಸೂರ್ಯಕಾಂತ ವಡೇರ, ಪಶು ಇಲಾಖೆಯ ಡಾ. ಬಸಪ್ಪ, ಇತರರಿದ್ದರು.