ಜಿಲ್ಲೆ

ಹೂವಿನಹಡಗಲಿ ಬರ ಪೀಡಿತ ತಾಲೂಕೆಂದು ಘೋಷಿಸಲು ರೈತರ ಮನವಿ

Vijayanagara - Veerendra

ಹೂವಿನಹಡಗಲಿ: ಈ ಬಾರಿ ಮಳೆಯ ಕೊರತೆಯಿಂದ ತಾಲೂಕಿನಲ್ಲಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ಹಾನಿಗೀಡಾಗಿದ್ದು ಮತ್ತು ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಿಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಘಟಕದಿಂದ ಹೂವಿನಹಡಗಲಿಯ ತಹಸೀಲ್ ಕಚೇರಿಯಲ್ಲಿ ಸೋಮವಾರ ಉಪತಹಸೀಲ್ದಾರ್ ಮಲ್ಲಿಕಾರ್ಜುನ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ರವೀAದ್ರಸ್ವಾಮಿ ಮಾತನಾಡಿ, ತಾಲೂಕಿನ ರೈತರು ಬೆಳೆದ ಬೆಳೆಯು ಈ ಬಾರಿಯ ಮಳೆ ಕೊರತೆಯಿಂದ ಶೇ.೮೦ ರಷ್ಟು ಹಾನಿಯಾಗಿದ್ದು ಸರ್ಕಾರ ತಾಲೂಕುನ್ನು ಬರದ ತಾಲೂಕೆಂದು ಘೋಷಿಸಬೇಕು. ತಾಲೂಕಿನಲ್ಲಿ ವಿದ್ಯುತ್ ಸಂಪರ್ಕದ ತೊಂದರೆಯಿಂದ ಅನೇಕ ಭಾಗದ ನೀರಾವರಿ ಬೆಳೆಗಳು ಸಹ ಹಾನಿಗೀಡಾಗಿವೆ. ಮಳೆಯಿಲ್ಲದೆ ರೈತರು ಸಾಕಿನ ಧನ, ಕರುಗಳು ಮೇವು ಸಂಗ್ರಹಣೆ ಮಾಡಿಕೊಳ್ಳಲು ಸಹ ಕಷ್ಟವಾಗುತ್ತಿದ್ದು ಸರ್ಕಾರ ತಾಲೂಕಿನ ಹೊಬಳಿಗಳಲ್ಲಿ ಗೋ ಶಾಲೆಗಳನ್ನು ಪ್ರಾರಂಭಿಸಬೇಕು. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಹಾಗೂ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಸಮರ್ಪಕವಾಗಿ ಒದಗಿಸುವಂತಾಗಬೇಕು ಎಂದು ಆಗ್ರಹಿಸಿದರು.

ಅಖಂಡ ಕರ್ನಾಟಕ ರೈತ ಸಂಘ ತಾಲೂಕು ಕಾರ್ಯಾಧ್ಯಕ್ಷ ಅಮರೇಗೌಡ. ಉಪಾಧ್ಯಕ್ಷ ಬಿ.ಶಿವನಗೌಡ, ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ, ತಾಲೂಕು ಸಂಚಾಲಕ ಹಾಲೇಶಪ್ಪ, ಹಡಪದ ರುದ್ರಪ್ಪ, ಹುಸೇನ್ ಭಾಷಾ, ಚನ್ನಬಸಪ್ಪ ಹಾಗೂ ಇತರರಿದ್ದರು.