ರಾಮನಗರ : ಸರ್ಕಾರ ವಿವಿಧ ಕಾರ್ಮಿಕ ಸಮುದಾಯಕ್ಕೆ ಹಾಗೂ ಬೆಳೆಗಳಿಗೆ ಸಂಕಷ್ಟ ಪರಿಹಾರ ಧನ ೋಷಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಹಾಲು ಮತ್ತು ರೇಷ್ಮೆ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಜಿಲ್ಲ್ಲೆ ಪ್ರಮುಖವಾಗಿ ಸಿಲ್ಕ್ ಮತ್ತು ಮಿಲ್ಕ್ ಮೇಲೆ ಅವಲಂಬಿತವಾಗಿದ್ದು ಸರ್ಕಾರ ಈ ಎರಡನ್ನೂ ನಂಬಿರುವ ರೈತರಿಗೆ ನೆರವು ೋಷಣೆ ಮಾಡಿಲ್ಲ ಎನ್ನುವ ಕೂಗು ಎದ್ದಿದೆ. ಕರೊನಾದಿಂದಾಗಿ ಜಿಲ್ಲೆಯಲ್ಲಿ ರೇಷ್ಮೆ ಬೆಲೆ ಕುಸಿತ ಆರಂಭಗೊಂಡಿದೆ. ಒಂದೆಡೆ ನೂಲಿಗೆ ಮಾರುಕಟ್ಟೆ ಕುಸಿದಿರುವ ಬೆಳೆಗಾರರ ಮೇಲೆ ಪರಿಣಾಮ ಬೀರಿದೆ. ಮಾರುಕಟ್ಟೆಗೆ ಬರುವ ಹೆಚ್ಚಿನ ಪ್ರಮಾಣದ ಗೂಡು ಕೆ.ಜಿ.ಗೆ 250 ರೂ. ಆಸುಪಾಸಿನಲ್ಲಿಯೇ ಮಾರಾಟ ಆಗುತ್ತಿದೆ. ಇದರಿಂದಾಗಿ ರೈತರಿಗೆ ನಷ್ಟವಾಗುತ್ತಿದೆ.
ಗುರುವಾರ ಮಾರುಕಟ್ಟೆಯಲ್ಲಿ ಮಾರಾಟವಾದ ಒಟ್ಟು 12 ಸಾವಿರ ಕೆಜಿ ಮಿತ್ರತಳಿ ಗೂಡಿನಲ್ಲಿ 1586 ಕೆಜಿ ಗೂಡಿಗೆ ಮಾತ್ರ 276-300 ರೂ. ಒಳಗೆ ಬೆಲೆ ಸಿಕ್ಕಿದ್ದು. 300 ರಿಂದ 350 ರೂ. ಬೆಲೆ ಕೇವಲ 274 ಕೆಜಿ ಗೂಡಿಗೆ ಲಭ್ಯವಾಗಿದೆ. ಅಲ್ಲದೆ 201ರಿಂದ 275ರವರೆಗೆ 11.5 ಸಾವಿರ ಕೆಜಿ ಗೂಡಿಗೆ ಬೆಲೆ ನಿಗದಿಯಾಗಿದೆ. ಇನ್ನು ದ್ವಿತಳಿ ಗೂಡಿನ ಬೆಲೆ ಇದಕ್ಕಿಂತ ಭಿನ್ನವಾಗಿಲ್ಲ, 500 ರೂ. ಆಸುಪಾಸಿನಲ್ಲಿದ್ದ ಪ್ರತಿ ಕೆಜಿ ಗೂಡಿನ ಧಾರಣೆ ಬೆಲೆ ಈಗ 350 ರೂ.ಗೆ ಇಳಿದಿದ್ದು, ಗುರುವಾರ ಖರೀದಿ ಆದ ಒಟ್ಟು 15.5 ಸಾವಿರ ಕೆಜಿ ಗೂಡಿನಲ್ಲಿ ಒಟ್ಟು 13 ಸಾವಿರ ಕೆಜಿ ಗೂಡು 301ರಿಂದ 350 ರೂ. ನಡುವೆ ಮಾರಾಟವಾಗಿದೆ. ಇದು ರೈತರಿಗೆ ಭಾರೀ ನಷ್ಟ ಉಂಟು ಮಾಡುತ್ತಿದೆ. ಕಳೆದ ಬಾರಿ ಸರ್ಕಾರ ಪ್ರತಿ ಕೆಜಿ ಮಿಶ್ರ ತಳಿಗೆ 30 ರೂ. ಹಾಗೂ ದ್ವಿತಳಿಗೆ 50 ರೂ. ಪ್ರೋತ್ಸಾಹಧನ ನೀಡುವುದಾಗಿ ಹೇಳಿ ಇದಕ್ಕಾಗಿ ಸುಮಾರು 30 ಕೋಟಿ ರೂ. ಮಂಜೂರು ಮಾಡಿದಂತೆಯೇ ಈ ಬಾರಿಯೂ ಮಾಡಬೇಕು ಎಂಬುದು ರೈತರ ಕೂಗಾಗಿದೆ.
ಬೇಕಿದೆ ಸರ್ಕಾರದ ನೆರವು : ಸರ್ಕಾರ ಈ ಕೂಡಲೇ ಸಿಲ್ಕ್ ಮತ್ತು ಮಿಲ್ಕ್ ಉತ್ಪಾದನೆಯನ್ನೇ ನಂಬಿಕೊಂಡಿರುವ ರೈತರ ನೆರವಿಗೆ ಧಾವಿಸಬೇಕಿದೆ. ಕಳೆದ ವರ್ಷ ರೇಷ್ಮೆ ಬೆಳೆಗಾರರಿಗೆ ೋಷಣೆ ಮಾಡಿದಂತೆ ಪ್ರೋತ್ಸಾಹ ಧನವನ್ನು ಈ ವರ್ಷವೂ ಕರೊನಾ ಕಾಲಕ್ಕೆ ಅನ್ವಯವಾಗುವಂತೆ ನೀಡಬೇಕು. ಅದೇ ರೀತಿ ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಈಗಾಗಲೇ ನೀಡುತ್ತಿರುವ ಹಾಲಿನ ಪ್ರೋತ್ಸಾಹ ಧನದ ಜತೆಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು ಎನ್ನುವ ಬೇಡಿಕೆ ರೈತರದ್ದು.
ಹಾಲಿನ ಬೆಲೆ ಕುಸಿತ : ರಾಮನಗರ ಜಿಲ್ಲೆಯ ರೈತರ ಮತ್ತೊಂದು ಮುಖ್ಯ ಕಸುಬು ಹೈನುಗಾರಿಕೆ. ಪ್ರತಿದಿನ 9-10 ಲಕ್ಷ ಲೀಟರ್ ಹಾಲು ರಾಮನಗರ ಒಂದರಲ್ಲೇ ಉತ್ಪಾದನೆ ಆಗುತ್ತದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಬೇಡಿಕೆ ಕುಸಿತವಾಗಿರುವುರಿಂದ ಬಮುಲ್ ಈಗಾಗಲೇ ಪ್ರತಿ ಲೀಟರ್ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್ 1.50 ರೂ. ಇಳಿಕೆ ಮಾಡುವುದಾಗಿ ಹೇಳಿದ್ದು ಇದು ಜೂ.1ರಿಂದ ಜಾರಿಗೆ ಬರಲಿದ್ದು, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮತ್ತಷ್ಟು ಆಘಾತ ಉಂಟು ಮಾಡಿದೆ.
ಬಮುಲ್ ನಷ್ಟದಲ್ಲಿದೆ. ಇದರಿಂದ ಅನಿವಾರ್ಯವಾಗಿ ಬೆಲೆ ಕಡಿತ ಮಾಡಲೇಬೇಕಿದೆ. ಸರ್ಕಾರ ಬಮುಲ್ ನೆರವಿಗೆ ನಿಲ್ಲಬೇಕಿದೆ. ಇದರಿಂದ ಬಮುಲ್ ಮತ್ತು ರೈತ ಸಮುದಾಯ ಎರಡಕ್ಕೂ ಅನುಕೂಲವಾಗಲಿದೆ. ನರಸಿಂಹಮೂರ್ತಿ ಬಮುಲ್ ಅಧ್ಯಕ್ಷ ಕರೊನಾ ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ಬೆಲೆ ಕುಸಿತ ಕಂಡಿದೆ. ಸರ್ಕಾರ ಕೂಡಲೇ ಕಳೆದ ವರ್ಷದಂತೆ ಈ ಬಾರಿಯೂ ಅನುದಾನ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಬೇಕಿದೆ. ಕೆ.ರವಿ ರೇಷ್ಮೆ ಮಾರುಕಟ್ಟೆ ಸಲಹಾ ಸಮಿತಿ ಸದಸ್ಯ, ರಾಮನಗರ