ರಾಮದುರ್ಗ: ಸಾಲಾಪುರ ಬಸವೇಶ್ವರ ಏತ ನೀರಾವರಿ ಯೋಜನೆಯಡಿ ತಾಲೂಕಿನ 19 ಗ್ರಾಮಗಳ ಸುಮಾರು 13 ಸಾವಿರ ಹೆಕ್ಟೇರ್ ಭೂಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ.
ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸುತ್ತೇನೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಭರವಸೆ ನೀಡಿದರು.
ತಾಲೂಕಿನ ಬಟಕುರ್ಕಿ ಗ್ರಾಮದ ಬಳಿ ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಯಡಿ ಸುಮಾರು 27 ಕೋಟಿ ರೂ. ವೆಚ್ಚದಲ್ಲಿ ಸಾಲಾಪುರ ಏತ ನೀರಾವರಿ ಮಲಪ್ರಭಾ ಎಡದಂಡೆ ಕಾಲುವೆ ಸುಮಾರು ರೆತರ ಜಮೀನಿಗೆ ನೀರಾವರಿ ಸಂಪರ್ಕ ಕಲ್ಪಿಸುವ ಉಪಹಂಚು ಕಾಲುವೆ ನಿರ್ಮಾಣ, ಮುದೇನಕೊಪ್ಪ ಕಾಗಿ ಹಳ್ಳಕ್ಕೆ 2.70 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣ, 4.11 ಕೋಟಿ ರೂ. ವೆಚ್ಚದಲ್ಲಿ ಕೊಳಚಿ ಬಲದಂಡೆ ಮುಖ್ಯಕಾಲುವೆ ಸುಧಾರೀಕರಣ, 40 ಲ ರೂ. ವೆಚ್ಚದಲ್ಲಿ ಎಂ. ಕಲ್ಲಾಪುರ ಗ್ರಾಮದ ಕೆರೆ ಅಭಿವದ್ಧಿ ಕಾಮಗಾರಿಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಅಂತರ್ಜಲ ಸುಧಾರಣೆಗಾಗಿ ಹಳ್ಳಕ್ಕೆ ಬ್ರಿಡ್ಜ್ ಕಂ&ಬ್ಯಾರೇಜ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದ್ದು, ರೆತರು ಸದ್ಬಳಕೆ ಮಾಡಿಕೊಳ್ಳಬೇಕು. ತಾಲೂಕಿನ ರೆತರ ಆಶಾಕಿರಣವಾದ ಈ ಕಾಮಗಾರಿಗಳಿಗೆ ಜನತೆ ಸಹಕಾರ ನೀಡಬೇಕು ಎಂದರು.
ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ವೆ. ಹೊಕ್ರಾಣಿ ಮಾತನಾಡಿ, ಬಸವೇಶ್ವರ ಏತ ನೀರಾವರಿ ಯೋಜನೆಯ ಮುಖ್ಯಕಾಲುವೆ ಕಾಮಗಾರಿ ಶೇ.90 ಮುಕ್ತಾಯಗೊಂಡಿದೆ. ನಮ್ಮ ಅಭಿಯಂತ ಕಚೇರಿ ವ್ಯಾಪ್ತಿಯ ಎಲ್ಲ ಕಾಮಗಾರಿ ಗುತ್ತಿಗೆದಾರರು, ಶಾಸಕರ ಸಹಕಾರದೊಂದಿಗೆ ಸಕಾಲದಲ್ಲಿ ಮುಗಿಸಲಾಗುವುದು. ಶಾಸಕರ ಸಲಹೆಯ ಮೇರೆಗೆ ಕೆಲಸ ನಿರ್ವಹಿಸುತ್ತೇವೆ ಎಂದರು.
ಮುಖಂಡರಾದ ಬಸನಗೌಡ ಪ್ಯಾಟಿಗೌಡ್ರ, ರಾಮಣ್ಣ ಬಿಡಕಿ, ಗ್ರಾಪಂ ಅಧ್ಯ ಹನುಮಂತ ಲಕ್ಕನ್ನವರ,
ಜಿಪಂ ಮಾಜಿ ಸದಸ್ಯ ಜಹೂರ್ ಹಾಜಿ, ಪರಪ್ಪ ಜಂಗವಾಡ, ಅಧಿಕಾರಿಗಳಾದ ಶ್ರೀನಿವಾಸ್,
ಮಲ್ಲಿಕಾರ್ಜುನ ಇತರರಿದ್ದರು.