module: a; hw-remosaic: 0; touch: (0.36851853, 0.36851853); modeInfo: ; sceneMode: Auto; cct_value: 0; AI_Scene: (-1, -1); aec_lux: 121.0; hist255: 0.0; hist252~255: 0.0; hist0~25: 0.0; 
ಜಿಲ್ಲೆ

ಗೊಬ್ಬರದ ಅಂಗಡಿ ಮುಂದೆ ರೈತರ ಕ್ಯೂ

ಎ.ಅಪ್ಪಾಜಿಗೌಡ ಮುಳಬಾಗಿಲು :  ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಚುರುಕುಗೊಂಡಿದೆ. ಕೆಲ ಬೆಳೆಗಳನ್ನು ಈಗಾಗಲೇ ಬಿತ್ತನೆ ಮಾಡಲಾಗಿದ್ದು, ಮಳೆಯಾಶ್ರಿತ ಬೆಳೆಗಳ ಉಳುಮೆ ಈಗ ಆರಂಭಗೊಂಡಿದೆ. ಈ ಹೊತ್ತ್ತಿನಲ್ಲಿ ರೈತರಿಗೆ ಅವಶ್ಯವಾಗಿ ಬೇಕಿರುವ ರಸಗೊಬ್ಬರ, ಅದರಲ್ಲೂ ಎಲ್ಲೆಡೆ ಬಹುಬೇಡಿಕೆಯ ಯೂರಿಯಾಗೆ ಜನ ಮುಗಿ ಬೀಳುತ್ತಿದ್ದಾರೆ. ಮುಳಬಾಗಿಲಿನಲ್ಲೂ ಗಂಟೆಗಟ್ಟಲೇ ಸಾಲುಗಟ್ಟಿ ನಿಂತು ರಸ ಗೊಬ್ಬರ ಪಡೆಯುಂತಾಗಿದೆ. ಗೊಬ್ಬರ ವಿತರಣಾ ಕೇಂದ್ರದ ಮುಂಭಾಗಕ್ಕೆ ಯೂರಿಯಾ ತುಂಬಿದ ಲಾರಿ ಬರುತ್ತಿದ್ದಂತೆ ಲೋಡ್​ ಖಾಲಿಯಾಗುತ್ತಿದೆ.

ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದ್ದು, ಬಿತ್ತಿದ ಪೈರು ವೇಗವಾಗಿ ಬೆಳೆಯಲು ಯೂರಿಯಾ ಗೊಬ್ಬರ ಹಾಕಬೇಕು, ಇಲ್ಲದ್ದಲ್ಲಿ ಪೈರು ಶಕ್ತಿ ಕಳೆದುಕೊಂಡು ಕಳೆ ಹೆಚ್ಚಾಗುತ್ತದೆ ಎಂಬ ಧಾವಂತದಲ್ಲಿ ರೈತರು ದಿನಗಟ್ಟಲೇ ಕಾದು ನಾ ಮುಂದು ತಾ ಮುಂದು ಎಂಬಂತೆ ಯೂರಿಯಾ ಮೂಟೆ ಹೊತ್ತೊಯ್ಯುವ ದೃಶ್ಯ ನಿತ್ಯ ಕಂಡುಬರುತ್ತಿದೆ.

ಎಪಿಸಿಎಂಎಸ್​ ಮೂಲಕ ಈಗಾಗಲೇ 45 ಕೆಜಿಯಂತೆ 1,600 ಮೂಟೆ ವಿತರಣೆ ಮಾಡಲಾಗಿದ್ದು, ಒಟ್ಟಾರೆ ಈವರೆಗೆ 450 ಟನ್​ ಮಾರಾಟವಾಗಿದೆ. ಪ್ರತಿ ವರ್ಷಕ್ಕಿಂತಲೂ ಈ ಬಾರಿ ಬೇಡಿಕೆ ಹೆಚ್ಚಿದ್ದು. ಜೂನ್​, ಜುಲೈನಲ್ಲಿ ಮಳೆ ಇಲ್ಲದ ಪರಿಣಾಮ ಈಗ ಎಲ್ಲ ರೈತರು ಒಟ್ಟಿಗೆ ಗೊಬ್ಬರ ಪಡೆಯಲು ಮುಂದಾಗಿದ್ದಾರೆ.

ಅರಿವು ಮೂಡಿಸುವಲ್ಲಿ ವಿಲ

ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಭೂಮಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆಗೂ ಧಕ್ಕೆ, ಮಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಸರ್ಕಾರ, ಅಧಿಕಾರಿಗಳು ವಿಲರಾಗಿದ್ದಾರೆ. ಪ್ರಸ್ತುತ ರೈತರು ಕೃಷಿ ಎಂದರೆ ರಾಸಾಯನಿಕ ಗೊಬ್ಬರ ಬಿಟ್ಟು ಕೃಷಿ ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಒಳಗಾಗಿರುವುದು ಮತ್ತೊಂದು ಕಾರಣವಾಗಿದೆ.

ನ್ಯಾನೋ ಯೂರಿಯಾ ಉಪಯುಕ್ತ

ಹರಳು ಯೂರಿಯಾಕ್ಕಿಂತಲೂ ದ್ರವರೂಪದ ನ್ಯಾನೋ ಯೂರಿಯಾ ಉಪಯುಕ್ತವಾದರೂ ಈ ಬಗ್ಗೆ ಹೆಚ್ಚಿನ ಪ್ರಚಾರ ಇಲ್ಲದಿರುವುದು, ಬಳಕೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸದ ಕಾರಣ ನ್ಯಾನೋ ದ್ರವರೂಪದ ಯೂರಿಯಾ ಬಳಕೆಗೆ ರೈತರು ನಿರಾಸಕ್ತಿ ವಹಿಸಿದ್ದಾರೆ.

ದ್ರವರೂಪದ ಯೂರಿಯಾ ಭೂಮಿಗೆ ಸೇರಿಸುವುದಲ್ಲ, ಬೆಳೆ ಪೈರಿಗೆ ಸೆ ಮೂಲಕ ಸಿಂಪಡಣೆ ಮಾಡಿದರೆ ನೇರ ಪೈರು ಮತ್ತು ಬೆಳೆಗೆ ಸಿಕ್ಕಿ ಉತ್ತಮ ಬೆಳೆ ಬೆಳೆಯಲು ಸಾಧ್ಯ. ನ್ಯಾನೋ ಯೂರಿಯಾ ಬೆಲೆಯೂ ಕಮ್ಮಿ, ಸಾಗಣೆಯೂ ಸುಲಭ. ಆದರೆ, ಈ ಗೊಬ್ಬರ ಹಾಕಲು ಹೆಚ್ಚು ಖರ್ಚು ತಗಲುತ್ತದೆ ಎಂಬುವುದು ರೈತರ ಮಾತು.

ಸಾವಯವ ಕೃಷಿ ಆದರ್ಶ : ಸಾವಯವ ನೈಸರ್ಗಿಕ ಕೃಷಿಕರು ಯೂರಿಯಾ ಗೊಬ್ಬರ ಬದಲಾಗಿ ರಾಸುಗಳ ಸಗಣಿ, ಗಂಜಲ, ಗಿಡ&ಬಳ್ಳಿಗಳ ರಸಗಳೊಂದಿಗೆ ಮರಳು ಮಿಶ್ರಣದಲ್ಲಿ ತಯಾರಿಸಿಕೊಂಡು ಬಳಕೆ ಮಾಡುತ್ತಿದ್ದು, ಇದು ರೈತರಿಗೆ ಮಾದರಿಯಾಗಬೇಕಿದೆ. ಇಂತಹ ಕೃಷಿಕರು ತೆರೆ ಮರೆಯಲ್ಲಿ ಉಳಿದಿದ್ದು, ವಿಷಮುಕ್ತ ಪೌಷ್ಟಿಕ ಆಹಾರ ನೀಡುವರು ಸಮಾಜಕ್ಕೆ ಆದರ್ಶರಾಗಬೇಕಾಗಿದೆ.

ಮುಳಬಾಗಿಲಿನಲ್ಲಿ ಈಗಲೂ 250 ಟನ್​ ಯೂರಿಯಾ ದಾಸ್ತಾನು ಇದೆ. ರೈತರು ಆತಂಕಪಡಬೇಕಿಲ್ಲ. ಮಳೆಯಾಗುತ್ತಿರುವ ಈ ಸಂದರ್ಭದಲ್ಲಿ ಗೊಬ್ಬರ ಹಾಕುವುದು ಸೂಕ್ತವಲ್ಲ, ಟಿಎಪಿಸಿಎಂಎಸ್​ನಲ್ಲಿ ನಿರಂತರವಾಗಿ ವಿತರಣೆ ಮಾಡಲಾಗುತ್ತದೆ. ಖಾಸಗಿ ಅಂಗಡಿಗಳಲ್ಲೂ ಲಭ್ಯವಿದೆ. ನ್ಯಾನೋ ಗೊಬ್ಬರ 1 ಲೀಟರ್​ಗೆ 220 ರೂ., ಹರಳು ರೂಪದ ಯೂರಿಯಾ 1 ಚೀಲ 270 ರೂ. ಇದು ಎರಡು ಸಹ 2 ಎಕರೆಗೆ ಸರಿ ಹೊಂದುತ್ತದೆ, ರೈತರು ಈ ಬಗ್ಗೆ ಗಮನ ಹರಿಸಬೇಕು. ಎಸ್​.ರವಿಕುಮಾರ್​ ಹಿರಿಯ ಸಹಾಯಕ ಕೃಷಿ ನಿರ್ದೇಶಕ, ಮುಳಬಾಗಿಲು ಅಮೋನಿಯಂ ಸಲ್ಫೇಟ್​ ಮತ್ತು ಕಾರ್ಬನ್​ ಡೈಆಕ್ಸೆಡ್​ ರಾಸಾಯನಿಕ ಮಿಶ್ರಣವೇ ಯೂರಿಯಾ, ಇದನ್ನು ಸಾಯುವ ಪದ್ಧತಿಯಲ್ಲಿ ರೈತರೇ ತಯಾರಿಸಿಕೊಳ್ಳುವುದರಿಂದ ಖರ್ಚು ಕಡಿಮೆ. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ನಾಟಿ ಹಸು ಅಥವಾ ದನದ ಕೊಟ್ಟಿಗೆ ಬಳಿ ಎರಡು ಮೂರು ತೊಟ್ಟಿಗಳನ್ನು ನಿರ್ಮಿಸಿ ಅದರಲ್ಲಿ ಮರಳು ತುಂಬಿ ಸಗಣಿ ಮಿಶ್ರಿತ ಗಂಜಲ ಹೋಗುವಂತೆ ಮಾಡಿ, ಅನುಕೂಲವಿದ್ದರೆ ಬಚ್ಚಲು ಮನೆಯ ಒಲೆಯಿಂದ ಕಟ್ಟಿಗೆಯಲ್ಲಿ ಬರುವ ಹೊಗೆಯನ್ನು ಈ ತೊಟ್ಟಿಗೆ ಹೋಗುವಂತೆ ಮಾಡಿದರೆ ಇದಕ್ಕಿಂತಲೂ ಉತ್ತಮ ಯೂರಿಯ ಯಾವುರೂ ಇಲ್ಲ. ಎನ್​. ಧರ್ಮಲಿಂಗಮ್​ ಸಾವಯವ ಕೃಷಿ ಸಾಧಕ, ಪೆರುಮಾಕನಹಳ್ಳಿ