ಬ್ಯಾಡಗಿ: ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ವಿತರಣೆಗೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರು ರೈತ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಗೆ ಕುರಿ ಹಿಂಡು, ಚಕ್ಕಡಿಗಳು, ಟ್ರ್ಯಾಕ್ಟರ್ ಹಾಗೂ ಹೈನುರಾಸು, ಸಾಕು ನಾಯಿಗಳನ್ನು ತರಲಾಗಿತ್ತು. ಎತ್ತುಗಳನ್ನು ತಹಸೀಲ್ದಾರ್ ಕಾರ್ಯಾಲಯ ಒಳಗೆ ನುಗ್ಗಿಸಲು ರೈತರು ಯತ್ನಿಸಿದರು. ಸಾವಿರಾರು ರೈತರು ತಹಸೀಲ್ದಾರ್ ಕಾರ್ಯಾಲಯ ಎದುರು ಜವಾಯಿಸಿ ಸರ್ಕಾರದ ವಿರುದ್ಧ ೋಷಣೆ ಕೂಗಿದರು.
ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಲಕ್ಷಗಟ್ಟಲೇ ಖರ್ಚು ವಾಡಿ ಬಿತ್ತಿದ ಬೆಳೆ ನೀರಿನಲ್ಲಿ ನಿಂತಿದೆ. ರೈತ ಸಮುದಾಯ ವಿಮೆ ಹಾಗೂ ಪರಿಹಾರಕ್ಕಾಗಿ ಹಗಲಿರುಳು ಹೋರಾಟ ನಡೆಸಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಉಪ ಚುನಾವಣೆಯ ಗುಂಗಿನಲ್ಲಿದ್ದು, ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ವಿಮೆ ಕಂಪನಿ ರೈತರು ಹಾಗೂ ಸರ್ಕಾರಗಳಿಂದ 255 ಕೋಟಿ ರೂ. ವಿಮೆ ಕಂತು ತುಂಬಿಸಿಕೊಂಡು ಶೇ. 25ರಷ್ಟು (131 ಕೋಟಿ ರೂ) ವಿತರಿಸಿದೆ. ಆದರೆ, ನಮ್ಮ ಕಂತಿನ ಹಣದಲ್ಲಿ 124 ಕೋಟಿ ರೂ. ಉಳಿಸಿಕೊಂಡ ವಿಮೆ ಕಂಪನಿ ಹಗಲು ದರೋಡೆ ವಾಡುತ್ತಿದೆ. ಇದನ್ನು ಪ್ರಶ್ನಿಸಲು ಸಂಸದರು, ಶಾಸಕರು, ಮಂತ್ರಿಗಳು ತಯಾರಿಲ್ಲ. ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ತಹಸೀಲ್ದಾರ್ ನಯಾಪೈಸೆ ಬಿಡುಗಡೆ ಮಾಡಿಲ್ಲ. ಪರಿಹಾರಕ್ಕೆ ಅರ್ಜಿ ಪಡೆಯಲು ಜಿಲ್ಲಾಧಿಕಾರಿ ಆದೇಶ ಇಲ್ಲವೆಂದು ತಿಳಿಸುತ್ತಿದ್ದು, ಸರ್ಕಾರ, ಅಧಿಕಾರಿಗಳ ಗೊಂದಲದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.
ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ವಾತನಾಡಿ, ತಾಲೂಕಿನಲ್ಲಿ 15 ದಿನಗಳಿಂದ ಮಳೆ ಸುರಿದು ಗೋವಿನಜೋಳದ ತೆನೆಗಳು ನೀರಿನಲ್ಲಿವೆ. ಪ್ರಸಕ್ತ ವಾರದಲ್ಲಿ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
4 ಸಾವಿರಕ್ಕೂ ಹೆಚ್ಚು ರೈತರಿಂದ ಬೆಳೆ ಹಾನಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದರು. ಬಳಿಕ ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟೆ ರೈತರಿಂದ ಮನವಿ ಸ್ವೀಕರಿಸಿದರು. ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಗಂಗಣ್ಣ ಎಲಿ, ಕೆ.ವಿ. ದೊಡ್ಡಗೌಡರ, ಶಂಕರ ಮರಗಾಲ, ಮಲ್ಲೇಶಪ್ಪ ಡಂಬಳ, ಕೀರೇಶ ಅಜಗೊಂಡ್ರ, ಪ್ರಕಾಶ ಸಿದ್ದಪ್ಪನವರ ಇತರರಿದ್ದರು.