ಗಜೇಂದ್ರಗಡ: ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ರೈತರ ಜಮೀನಿನಲ್ಲಿ ವಿದ್ಯುತ್ ಕಂಪನಿಗಳು ಹಾಕಿರುವ ವಿದ್ಯುತ್ ಟವರ್ ಹಾಗೂ ವಿದ್ಯುತ್ ತಂತಿ ಮಾರ್ಗಕ್ಕೆ ಪರಿಹಾರ ಕೊಡಬೇಕೆಂದು ಆಗ್ರಹಿಸಿ ರೈತರು ಗುಳಗುಳಿ ವಿದ್ಯುತ್ ಗ್ರಿಡ್ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ರೈತರ ಜಮೀನುಗಳು ಗುಳಗುಳಿ ಸರಹದ್ದಿನಲ್ಲಿದ್ದು, ರೈತರು ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಟವರ್ ಹಾಕಲಾಗಿದೆ. ಜತೆಗೆ ವಿದ್ಯುತ್ ಮಾರ್ಗದಿಂದ ಜಮೀನಿನಲ್ಲಿನ ತೆಂಗಿನ ಮರಗಳಿಗೆ ಬೆಂಕಿ ಹತ್ತಿ ಉರಿಯುತ್ತಿವೆ. ಜಮೀನಿನಲ್ಲಿ ಹಾಕಲಾಗಿರುವ ವಿದ್ಯುತ್ ಟವರ್ಗಳಲ್ಲಿ ವಿದ್ಯುತ್ ಸರಬರಾಜು ಆಗುತ್ತಿದೆ. ಹೀಗಾಗಿ ಟವರ್ ಸುತ್ತಲೂ ಬೇಲಿ ಹಾಕಬೇಕು ಹಾಗೂ ಎಲ್ಲ ರೈತರಿಗೂ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ರೈತರಾದ ಮಂಜುನಾಥ ಬೆನಕನವಾರಿ, ಲಕ್ಷ್ಮಣ ಬೆನಕನವಾರಿ, ಅರವಿಂದ ಭಗವತಿ, ಹೊನಕೇರಪ್ಪ ಕೊಪ್ಪದ, ಬಸವರಾಜ ಬಾಬಜಿ, ವೀರಭದ್ರಪ್ಪ ರೊಟ್ಟಿ, ಮರಿಗೌಡಪ್ಪ ಗೌಡ್ರ, ಪರಶುರಾಮ ಕೊಪ್ಪದ, ಸತೀಶ ಕೊತಬಾಳ, ಸೋಮಪ್ಪ ಬೆನಕನವಾರಿ ಇದ್ದರು.