ಉಡುಪಿ: ಸರ್ಕಾರದಿಂದ ರೈತರ ನಿರ್ಲ್ಯಕ್ಷ ಹಾಗೂ ವಿವಿಧ ಬೇಡಿಕೆ ಆಗ್ರಹಿಸಿ ಶನಿವಾರ ಉಡುಪಿ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸುತಿದ್ದ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನೂರಾರು ರೈತರು ಡಿಸಿ ಕಚೇರಿ ಒಳಗಾಂಣಕ್ಕೆ ನುಗ್ಗಿ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಸುರಕ್ಷತಾ ಸಭೆಯಲ್ಲಿದ್ದ ಡಿಸಿ ಜಿ.ಜಗದೀಶ್ ರೈತರ ಬಳಿ ಆಗಮಿಸಿ, ಈ ರೀತಿ ಮಾಡುವುದು ಸರಿಯಲ್ಲ. ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೇವೆ. ಡಿಸಿ ಕಚೇರಿ ಒಳಾಂಗಣಕ್ಕೆ ಪ್ರವೇಶಿಸಿರುವುದು ಸರಿಯಲ್ಲ ಎಂದರು.
ಈ ನಡುವೆ ರೈತರು ಮತ್ತು ಕೃಷಿಕರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನಾಕಾರರನ್ನು ಒಳಗೆ ಬಿಟ್ಟಿದ್ದಕ್ಕೆ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ಎಎಸ್ಪಿ ಕುಮಾರ ಚಂದ್ರ ಪ್ರತಿಭಟನಾ ನಿರತ ರೈತರ ಮನ ಒಲಿಸಿ ಹೊರಗಡೆ ಕಳಿಸಿದರು