The Eightfold Path of Donation and Puja Festival 
ಜಿಲ್ಲೆ

ಕಬ್ಬು ಕಟಾವುದಾರರಲ್ಲಿ ತಾರತಮ್ಯ ನೀತಿಗೆ ವಿರೋಧ ರೈತರಿಂದ ವಿಜಯಪುರ&ಧಾರವಾಡ ಹೆದ್ದಾರಿ ತಡೆದು ಪ್ರತಿಭಟನೆ

ಜಮಖಂಡಿ:ಮಹಾರಾಷ್ಟ್ರ ಮತ್ತು ಸ್ಥಳಿಯ ಕಬ್ಬು ಕಟಾವುದಾರರಲ್ಲಿ ತಾರತಮ್ಯ ನೀತಿ ಅನುಸರಿಸಿರುವ ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ರೈತ ಸಂಟನೆ ಪದಾಧಿಕಾರಿಗಳು ವಿಜಯಪುರ&ಧಾರವಾಡ ರಾಜ್ಯಹೆದ್ದಾರಿಯಲ್ಲಿ ಗುರುವಾರ ರಾತ್ರಿ ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.ಮಹಾರಾಷ್ಟ್ರದ ಕಬ್ಬು ಕಟಾವು ಮಾಡುವ ಗ್ಯಾಂಗಿನವರಿಗೆ 140 ರೂ. ಗಳನ್ನು ಹೆಚ್ಚಿಗೆ ನೀಡಿದ್ದಾರೆ. ಆದರೆ ಸ್ಥಳಿಯ ಕಬ್ಬು ಕಟಾವು ಮಾಡುವ ಗ್ಯಾಂಗುಗಳಿಗೆ ಆ ಹಣವನ್ನು ನೀಡದೆ ತಾರತಮ್ಯ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ಸಕ್ಕರೆ ಕಾರ್ಖಾನೆಗಳ ಆಗಿರುವ ತಾರತಮ್ಯದ ಬಗ್ಗೆ ಗಮನಕ್ಕೆ ತಂದು ಸರಿಪಡಿಸುವಂತೆ ಹೇಳಿ ತಿಂಗಳು ಕಳೆದರೂ ಅವರು ಸ್ಪಂದಿಸದೆ ಹಿನ್ನೆಲೆ ಹೋರಾಟಕ್ಕೆ ಇಳಿಯುವಂತಾಗಿದೆ. ಕಾರ್ಖಾನೆಯವರು ರೈತರಲ್ಲಿ ತಾರತಮ್ಯ ಮಾಡದೆ ಕೂಡಲೆ ಹಣ ಜಮಾ ಮಾಡಬೇಕು, ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು. ಅಲ್ಲದೇ ಪ್ರಸಕ್ತ ಸಾಲಿನ ಹಂಗಾಮಿಗೆ ಟನ್​ ಕಬ್ಬಿಗೆ ನಾಲ್ಕು ಸಾವಿರ ರೂ. ೂಷಣೆ ಮಾಡಬೇಕು, ಬಾಕಿ ಇರುವ ಎಲ್ಲ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಅ. 17ರಂದು ಮುಧೋಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಮುತ್ತಪ್ಪ ಕೋಮಾರ, ಬಸವಂತಪ್ಪ ಕಾಂಬಳೆ, ಶ್ರೀಶೈಲ ಭೂಮಾರ, ಇತರರಿದ್ದರು.

ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗೇಶ್ವರ ಕಾರ್ಖಾನೆ ಬಳಿ ವಿಜಯಪುರ& ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ರೈತರು ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.