ಬೀಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಭಾರತೀಯ ಮಜದೂರ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ನಾಸಿರ್ ಬಾಗವಾನ ಹಾಗೂ ಅರವಿಂದ ಪಾಟೀ ಅವರನ್ನು ಸನ್ಮಾನಿಸಲಾಯಿತು. ಬಾಬಣ್ಣ ಪಾಟೀಲ, ಚಿಂತಾಮಣಿ ಕುಡೋಳ್ಳಿ, ಶಿವಾ ಬಾಗವಾಡಕರ ಹಾಗೂ ಇತರರು ಇದ್ದರು. 
ಜಿಲ್ಲೆ

ರೈತರ ಪ್ರಗತಿಗಾಗಿ ಕಾರ್ಖಾನೆಗಳ ಶ್ರಮ

ಇಟಗಿ: ರೈತರ ಆರ್ಥಿಕ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಮುಖ ಪಾತ್ರ ವಹಿಸಿದೆ ಎಂದು ರಾಣಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ನಾಸಿರ್ ಬಾಗವಾನ ಹೇಳಿದ್ದಾರೆ.

ಸಮೀಪದ ಬೀಡಿ ಗ್ರಾಮದಲ್ಲಿ ಮಂಗಳವಾರ ಸಂಜೆ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಭಾರತೀಯ ಮಜದೂರ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೈತರು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಮೂಲಕ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಸಹಕರಿಸಿ ಎಂದರು. ಮಾಜಿ ಶಾಸಕ ಅರವಿಂದ ಪಾಟೀಲ ಹಾಗೂ ಬಾಬಣ್ಣ ಪಾಟೀಲ ಮಾತನಾಡಿದರು.

ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಸಾನ್ನಿಧ್ಯ ವಹಿಸಿದ್ದರು, ರಾಜಕುಮಾರ ತಿಮ್ಮೋಲಿ ಅಧ್ಯಕ್ಷತೆ ವಹಿಸಿದ್ದರು. ಚಿಂತಾಮಣಿ ಕುಡೊಳ್ಳಿ, ಶಿವಾ ಬಾಗವಾಡಕರ, ನಾಗೇಶ ಮರೆಪ್ಪಗೋಳ, ವಿಕಾಸ ದೇಸಾಯಿ, ಜ್ನಾನೇಶ್ವರ ಪಾಳೇಕರ, ಗಣೇಶ ಶೆಟ್ಟಿ, ಪಪ್ಪು ತಾಶೇವಾಲೆ, ಗೋಪಾಲ ಪೂಜೇರಿ, ವಿಠ್ಠಲ ಮಳಕ, ಶಿವಾ ಬಾಗವಾಡದಕರ, ಶಿಕ್ಷಕ ವಿವೇಕ ಕುರಗುಂದ ಹಾಗೂ ಸಾಯಿ ವರ್ತಕರು ಸಂಘದ ಪದಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಭಾರತೀಯ ಮಜದೂರ ಸಂಘದ ಸದಸ್ಯರು ಇದ್ದರು.