ಮಡಿಕೇರಿ:
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಸಂಘದ ಕಾರ್ಯವ್ಯಾಪ್ತಿಯ ಎಲ್ಲಾ ಗ್ರಾಮಗಳ ಸದಸ್ಯರು ಭಾಗವಹಿಸಿದ್ದರು.
ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ ಹೇಮಂತ್ ಕುಮಾರ್ ನೇತೃತ್ವದಲ್ಲಿ ನೂರಾರು ರೈತರು ಮೇಳದಲ್ಲಿ ಭಾಗವಹಿಸಿ ಸುಸ್ಧಿರ ಅಡಿಕೆ ಕೃಷಿ, ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ, ಆರ್ಥಿಕ ಸದೃಢತೆಗಾಗಿ ವಾಣಿಜ್ಯ ಬೆಳೆಗಳ ಮಾಹಿತಿ ಸೇರಿದಂತೆ ಪ್ರಗತಿ ಪರ ರೈತರು ಹಾಗೂ ವಿಜ್ಞಾನಗಳಇದ್ದ ಚರ್ಚಾ ಗೋಷ್ಠಿಯಲ್ಲಿ ಭಾಗವಹಿಸಿ ಕೃಷಿಗೆ ಸಂಬAಧಿಸಿದAತೆ ಹೊಸ ಆವಿಷ್ಕಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು. ಕೃಷಿ ಮೇಳದಲ್ಲಿ ಹಾಕಲಾಗಿದ್ದ ಕೃಷಿ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆಗಳಿಗೆ ರೈತರು ಭೇಟಿ ನೀಡಿ ಕೃಷಿ ಸಂಬAಧಿಸಿದ ಮಾಹಿತಿಯನ್ನು ಪಡೆದುಕೊಂಡರು.
ಕೃಷಿ ಮೇಳದಲ್ಲಿ ಜಿಲ್ಲೆಯ ಪೂನ್ನಂಪೇಟೆ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ ತಂಡ ವತಿಯಿಂದ ವಸ್ತು ಪ್ರದರ್ಶನದಲ್ಲಿ ಕೃಷಿ ಮಳಿಗೆಯನ್ನು ತೆರೆಯಲಾಗಿತ್ತು. ಜಿಲ್ಲಾ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಜಿಲ್ಲೆಯ ರೈತರಿಗೆ ಕೃಷಿ ಮೇಳದ ವಿಕ್ಷಣೆ ಮಾಡಿಸುವುದರ ಜತೆಯಲ್ಲಿ ವಿವಿಧ ಕೃಷಿ ಯೋಜನೆಯ ಸಂಪೂರ್ಣವಾದ ಮಾಹಿತಿ ಸಂಬAಧಿಸಿದವರಿAದ ಒದಗಿಸಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಕೆ.ವಿ. ಬಸಪ್ಪ, ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ ರಾವ್, ಸಂಘದ ನಿರ್ದೆಶಕರಾದ ಕೆ.ಪಿ. ರಾಜು, ರಾಮಚಂದ್ರ, ಎಸ್.ಎಸ್. ಕೃಷ್ಣ, ಕೃಷ್ಣಗೌಡ, ಜಯಶ್ರೀ, ನಾಗರಾಜು, ರಮೇಶ್, ಕುಮಾರ್, ಪ್ರಗತಿಪರ ರೈತರಾದ ಕೆ.ವಿ. ಸಣ್ಣಪ್ಪ, ಶಶಿಕುಮಾರ್, ಸೋಮಣ್ಣ, ಮಂಜುನಾಥ ಹಾಗೂ ಮಹಿಳಾ ರೈತರು ಭಾಗವಹಿಸಿದ್ದರು.