ಇಟ್ಟಸಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಚಾಲನೆ ನೀಡಿದರು. ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ತಾಪಂ ಇಒ ಡಾ.ಸಿ.ಎನ್​. ನಾರಾಯಣಸ್ವಾಮಿ, ಗ್ರಾಪಂ ಅಧ್ಯೆ ರೂಪಾ, ಮುನಿವೆಂಕಟಮ್ಮ ಬಚ್ಚಪ್ಪ ಮೊದಲಾದವರು ಇದ್ದರು. 
ಜಿಲ್ಲೆ

ಟೌನ್​ಶಿಪ್​ ವಿಚಾರದಲ್ಲಿ ರೈತರಿಗೆ ಯಾವುದೇ ಆತಂಕ ಬೇಡ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನಂದಗುಡಿ: ನಂದಗುಡಿ ಭಾಗದ ರೈತರ ಜಮೀನನ್ನು ಟೌನ್​ಶಿಪ್​ಗೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಈ ಜವಾಬ್ದಾರಿ ನಾನು ತೆಗೆದುಕೊಳ್ಳದಿದ್ದರೆ ಮಾಗಡಿ ರೀತಿ ನಂದಗುಡಿ ಜಾಗಕ್ಕೆ ಕೂಡ ಅಧಿಸೂಚನೆ ಆಗುತ್ತಿತ್ತು. ನನಗೆ ಸಿಎಂ, ಡಿಸಿಎಂ ಸಹಕಾರದ ಜತೆಗೆ ನಿಮ್ಮ ಹೋರಾಟದಿಂದ ಭೂಮಿ ಉಳಿಯಲು ಸಾಧ್ಯವಾಗಿದೆ. ನಂದಗುಡಿ ಟೌನ್​ಶಿಪ್​ ವಿಚಾರವಾಗಿ ರೈತರಿಗೆ ಯಾವುದೇ ಆತಂಕ ಬೇಡ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ ತಾಲೂಕಿನ ಇಟ್ಟಸಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ರೈತರ ಅಭಿವೃದ್ಧಿ ದೃಷ್ಟಿಯಿಂದ ಹಲವು ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಸ್ರೇಲ್​ ಮಾದರಿ ಕೃಷಿಗೆ ಪೂರಕವಾಗುವ ಕೃಷಿ ಸೌಲಭ್ಯ ಒದಗಿಸುವುದು ಉತ್ತಮ ಎಂದರು. ಹೊಸಕೋಟೆಯಲ್ಲಿ ನೀರಾವರಿಗೆ ಯಾವುದೇ ರೀತಿಯ ಜಲಮೂಲಗಳಿಲ್ಲ. ಇದರ ನಡುವೆ ತಾಲೂಕಿಗೆ ವರ್ಷಕ್ಕೆ 2.4 ಟಿಎಂಸಿ ಮಳೆಯಾಗುತ್ತೆ. ಇದರಲ್ಲಿ 1.7 ಟಿಎಂಸಿ ನೀರನ್ನು ಭೂಮಿ ಹೀರಿಕೊಳ್ಳುತ್ತದೆ. ಆದರೆ ನಾವು ವರ್ಷಕ್ಕೆ ಬೋರ್​ವೆಲ್​ ಮೂಲಕ 3 ಟಿಎಂಸಿ ನೀರನ್ನು ತೆಗೆದು ಬಳಕೆ ಮಾಡುತ್ತಿದ್ದೇವೆ. ಇದೀಗ 1.5 ಸಾವಿರ ಅಡಿ ಬೋರ್ವೆಲ್​ ಕೊರೆಯುವ ಸನ್ನಿವೇಶ ಎದುರಾಗಿದೆ. ಇದರ ನಡುವೆ ಗ್ರಾಮಾಭಿವೃದ್ಧಿ ಕೆರೆ ಹೂಳೆತ್ತುವ ಮೂಲಕ ಅಂತರ್ಜಲ ವೃದ್ಧಿಸುತ್ತಿದೆ. ತಾಲೂಕಿನಲ್ಲಿ ಕಡಿಮೆ ನೀರನ್ನು ಬಳಸಿಕೊಂಡು ಇಸ್ರೇಲ್​ ಮಾದರಿಯಲ್ಲಿ ಕೃಷಿ ಮಾಡುವ ರೈತರು ಹೆಚ್ಚಾಗಿದ್ದು, ಅದಕ್ಕೆ ಪೂರಕವಾಗುವ ಸಲಕರಣೆ, ತರಬೇತಿ ಒದಗಿಸಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್​ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರಕ್ಕೆ ಪರ್ಯಾಯವಾಗಿ ಅಭಿವೃದ್ಧಿಗೆ ಪೂರಕವಾಗುವ ಕೆಲಸ ಮಾಡುತ್ತಿದೆ ಎಂದರು. ಉಪತಹಸೀಲ್ದಾರ್​ ಮಂಜುನಾಥ್​, ಹಿರಿಯ ಮುಖಂಡ ಐ.ಸಿ.ಮುನಿಶಾಮಗೌಡ, ಕೆರೆ ಸಮಿತಿ ಅಧ್ಯಕ್ಷ ರಮೇಶ್​, ಎಸ್​ಎಫ್​ಸಿಎಸ್​ ನಿರ್ದೇಶಕ ಧಮೇರ್ಶ್​, ಚಂದ್ರಪ್ಪ, ಮಾಜಿ ಅಧ್ಯೆ ಬಿಂದೂ, ರಾಮಾಂಜಿನಪ್ಪ, ಪಿಡಿಒ ಪುಷ್ಪಲತಾ, ಸದಸ್ಯರಾದ ಜಯರಾಮಯ್ಯ, ಅಸ್ಮಾತಾಜ್​ ಜಿಯಾವುಲ್ಲಾ, ವೃತ್ತ ನಿರೀಕ್ಷಕ ಲೋಕನಾಥ್​, ಗ್ರಾಮಲೆಕ್ಕಿಗ ತೇಜಸ್​, ಎಸ್​ಕೆಡಿಆರ್​ಪಿ ತಾಲೂಕು ಯೋಜನಾಧಿಕಾರಿ ಹರೀಶ್​ ಇತರರು ಇದ್ದರು.

ರಾಜ್ಯದಲ್ಲಿ ಹಲವು ಮೈಕ್ರೋ ಫೈನಾನ್ಸ್​ ಗಳು ಅನೇಕ ಆವಾಂತರ ಸೃಷ್ಟಿಸಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಕಷ್ಟು ಅಚ್ಚುಕಟ್ಟಾಗಿ ಸಂಗಳ ಮೂಲಕ ಸಾಲ ಕೊಟ್ಟು, ವಾಪಸ್​ ಪಡೆದುಕೊಡುವ ಕಾರ್ಯ ಗೊಂದಲವಿಲ್ಲದೆ ಮಾಡುತ್ತಿದೆ. | ಉಮರಬ್ಬ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ