ಹುಕ್ಕೇರಿ: ಕಾರ್ಖಾನೆ ಆರಂಭಿಸುವಲ್ಲಿ ಸದಸ್ಯರು ಹಾಗೂ ರೈತರು ಸಹಕಾರ ಬಹಳಷ್ಟಿದೆ. ಪ್ರಸಕ್ತ ಹಂಗಾಮಿನಲ್ಲಿ 4 ಲ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಬೇಕು ಎಂದು ಕಾರ್ಖಾನೆ ಅಧ್ಯ ರಾಜೇಂದ್ರ ಪಾಟೀಲ ಮನವಿ ಮಾಡಿದರು.
ತಾಲೂಕಿನ ಹಿಡಕಲ್ ಡ್ಯಾಮಿನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಪೂಜಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರ ಪ್ರೋತ್ಸಾಹದಿಂದ ಕಳೆದ ಮೂರು ಹಂಗಾಮು ಉತ್ತಮವಾಗಿ ನಡೆದಿವೆ ಎಂದರು.
ನಿರ್ದೇಶಕ ಶಶಿಕಾಂತ ನಾಯಿಕ ಮಾತನಾಡಿ, ಕಾರ್ಖಾನೆ ಸ್ಥಾಪಿಸುವಲ್ಲಿ ಮಾಜಿ ಸಚಿವ ದಿ.ಮಲ್ಹಾರಿಗೌಡ ಪಾಟೀಲ, ಮಾಜಿ ಶಾಸಕ ದಿ.ಎಸ್ ಎಸ್.ಮಹಾಜನಶೆಟ್ಟಿ ಹಾಗೂ ದಿ.ಗಂಗಾಧರಸ್ವಾಮಿ ತವಗಮಠ ಅವರ ಕೊಡುಗೆ ಕುರಿತು ಸ್ಮರಿಸಿದರು. ೂಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಹತ್ತರಗಿ ಕಾರಿ ಮಠದ ಗುರುಸಿದ್ದ ಸ್ವಾಮೀಜಿ, ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ, ಕ್ಯಾರಗುಡ್ಡ ಇಂಚಗೇರಿ ಮಠದ ಅಭಿನವ ಮಂಜುನಾಥ ಸ್ವಾಮೀಜಿ, ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ದಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ನಿರ್ದೇಶಕರಾದ ಬಸಗೌಡ ಪಾಟೀಲ, ಅರ್ಜುನ ಪಾಟೀಲ, ಸುಭಾಸ ಪಾಟೀಲ, ಅಮರನಾಥ ಮಹಾಜನಶೆಟ್ಟಿ, ರವೀಂದ್ರ ಪಾಟೀಲ, ಸಂಪತ್ ಬಾಂಧುರ್ಗೆ, ಸಂಗೀತಾ ಕರಗುಪ್ಪಿ, ರಾಜಶ್ರೀ ಕವಟಗಿಮಠ, ಲಗಮಣ್ಣ ಕೆಂಪಮಲಕಾರಿ, ಗಿರೀಶ ಮಿಶ್ರಕೋಟಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಇತರರಿದ್ದರು. ಅಣ್ಣಪ್ಪ ಅಕ್ಕತಂಗೇರಹಾಳ ನಿರೂಪಿಸಿದರು.