ಬೀಳಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ನಾಯಕ ಮಾತನಾಡಿದರು. ರಾಜ್ಯ ರೈತ ಸಂಘದ ಸಂಚಾಲಕ ಬಸವರಾಜ ಗೋನಾಳ ಇದ್ದರು. 
ಜಿಲ್ಲೆ

ಇಂದು ಗದ್ದನಕೇರಿ ಕ್ರಾಸ್‌ನಲ್ಲಿ ರೈತರ ಸಭೆ

ಬೀಳಗಿ: ರೈತರ ಕಬ್ಬಿಗೆ ಏಕರೂಪ ಬೆಲೆ ನಿಗದಿಗೆ ಒಕ್ಕೊರಲಿನಿಂದ ಹೋರಾಟ ಮಾಡುವ ಕುರಿತು ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಗದಗ ಜಿಲ್ಲೆಯ ಕಬ್ಬು ಬೆಳೆಗಾರರು ಮತ್ತು ರೈತ ಸಂಘದ ಸಂಘಟನಾ ಪದಾಧಿಕಾರಿಗಳು ನ. 11 ರಂದು 11 ಗಂಟೆಗೆ ಗದ್ದನಕೇರಿ ಕ್ರಾಸ್ ಯಲ್ಲಾಲಿಂಗ ದೇವಸ್ಥಾನದಲ್ಲಿ ಸಭೆ ನಡೆಯಲಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ ನಾಯಕ ಮನವಿ ಮಾಡಿದರು.

ಸ್ಥಳೀಯ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಯಾವುದೇ ಸರ್ಕಾರಗಳು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿವೆ. ಸರ್ಕಾರದ ಕಣ್ತೆರೆಸುವ ಕಾರ್ಯವನ್ನು ಸಂಘಟನೆಯವರು ಮತ್ತು ರೈತರು ಮಾಡಬೇಕಾಗಿದೆ. ಒಂದು ಜಿಲ್ಲೆಯಲ್ಲಿರುವ ಕಬ್ಬಿನ ಬೆಲೆ ಇನ್ನೊಂದು ಜಿಲ್ಲೆಯಲ್ಲಿಲ್ಲ. ಕಾರ್ಖಾನೆಯವರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಅದಕ್ಕಾಗಿ ಕಬ್ಬಿಗೆ ಏಕರೂಪ ಬೆಲೆ ನಿಗದಿಯಾಗಬೇಕು. ರೈತರು ಮತ್ತು ರೈತ ಸಂಘಟಣೆಯು ಒಗ್ಗಟ್ಟಾದರೆ ರೈತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಸಂಚಾಲಕ ಬಸವರಾಜ್ ಗೋನಾಳ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರಿಗೆ ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದು ತಿಳಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಗಂಗಪ್ಪ ಮಾದರ, ಜಿಲ್ಲಾ ರೈತ ಮುಖಂಡ ಈರಪ್ಪ ಹಂಚಿನಾಳ, ತಾಲೂಕು ಕಾರ್ಯದರ್ಶಿ ಶಿವನಗೌಡ ಪಾಟೀಲ, ಡಿ.ಎಂ. ನದ್ಾ, ಗೋವಿಂದಪ್ಪ ಸೊಕನಾದಗಿ, ಸಿದ್ರಾಮಯ್ಯ ಮಠಪತಿ, ರಾಜೇಂದ್ರ ಪಾಟೀಲ, ಬಸವರಾಜ್ ಹಲಕಿ ಇತರರಿದ್ದರು.