ಅರಟಾಳ: ರೈತರು ಬದು ನಿರ್ಮಾಣದ ಸದುಪಯೋಗ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ತಾಲೂಕು ಪಂಚಾಯಿತಿ ಇಒ ರವಿ ಬಂಗಾರೆಪ್ಪಣ್ಣವರ ಹೇಳಿದ್ದಾರೆ.
ಕೃಷಿ ಇಲಾಖೆಯಿಂದ ಸೋಮವಾರ ಗ್ರಾಮದಲ್ಲಿ ಕೈಗೊಂಡಿರುವ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಗ್ರಾಪಂ ಹಾಗೂ ಕೃಷಿ ಇಲಾಖೆ ಕೂಲಿ ಕೆಲಸ ಕೊಟ್ಟು ಸ್ಪಂದಿಸಿವೆ. ಒಬ್ಬ ಕಾರ್ಮಿಕರಿಗೆ ಪ್ರತಿ ದಿನ 275 ರೂ. ಕೂಲಿ ಸಿಗುತ್ತದೆ. ಕೂಲಿ ಕಾರ್ಮಿಕರು ಜಮೀನು ಹೊಂದಿದ್ದರೆ ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ಯೋಜನೆ ಸದುಪಯೋಗಕ್ಕೆ ರೈತರ ಸಹಕಾರ ಅವಶ್ಯವಾಗಿದೆ ಎಂದರು. ಪಿಡಿಒ ಎ.ಜಿ. ಎಡಕೆ ಮಾತನಾಡಿದರು. ಎಂ.ಪಿ. ಪಾಟೀಲ, ಮಲ್ಲಿಕಾರ್ಜುನ ತೆಲಸಂಗ,ವಿಠ್ಠಲ ಹಟ್ಟಿ, ಹನುಮಂತ ಹಟ್ಟಿ ಇದ್ದರು.