ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರು ತುಂಗಭದ್ರಾ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಸಮಸ್ಯೆ ಒಂದುಕಡೆಯಾದರೆ, ಆಕಾಲಿಕ ಮಳೆಯಿಂದ ಬೆಳೆದ ಬೆಳೆಯಲ್ಲ ಹಾಳಾಗಿರುವುದರಿಂದ ಭತ್ತ ಬೆಳೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಆಂಧ್ರ ಹಾಗೂ ತೆಲಂಗಾಣದ ಭತ್ತ ಜಿಲ್ಲೆಗೆ ಲಗ್ಗೆ ಇಟ್ಟಿದೆ.
ಜಿಲ್ಲೆಯಲ್ಲಿ ಕಳೆದ ಭಾರಿ ಬರಗಾಲದ ಜತೆಗೆ ನೀರಿನ ಅಲಭ್ಯತೆಯ ನಡುವೆಯೂ ಭತ್ತದ ಕೊರತೆ ನೀಗಿಸಲಾಗಿತ್ತು. ಆದರೆ ಈ ಬಾರಿ ನೀರಿದ್ದರು ಕೆಳ ಭಾಗದ ರೈತರಿಗೆ ಮಾತ್ರ ಸರಿಯಾದ ಪ್ರಮಾಣದಲ್ಲಿ ಭತ್ತ ಬೆಳೆದಿದ್ದರು, ಆದರತೆ ಆಕಾಲಿಕ ಮಳೆಯಿಂದ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ನೆರೆ ರಾಜ್ಯದಲ್ಲಿ ನೀರಿನ ಸಮಸ್ಯೆ ಇಲ್ಲದೆ ಇರುವುದರಿಂದ ನಿತ್ಯ ೪೦ ರಿಂದ ೪೫ ಸಾವಿರ ಚೀಲ ಸೋನಾ ಮಸೂರಿ, ಆರ್‌ಎನ್‌ಆರ್ ಭತ್ತ ಆವಾಕವಾಗುತ್ತಿದೆ.
ನಿತ್ಯ ೪೦ ರಿಂದ ೪೫ ಸಾವಿರ ಚೀಲ ಭತ್ತ ಆವಾಕ
ಏಷ್ಯನ್ ಖಂಡದ ೨ನೇ ಅತಿ ದೊಡ್ಡ ಮಾರುಕಟ್ಟೆ ಎಂದು ಹೆಸರು ಪಡೆದ ನಗರದ ಎಪಿಎಂಸಿ ರಾಜೇಂದ್ರ ಗಂಜ್‌ಗೆ ಕಳೆದ ೧೫ ದಿನಗಳಿಂದ ಏರೂ ರೀತಿಯಲ್ಲಿ ಭತ್ತ ಆವಕವಾಗುತ್ತಿದೆ. ನಿತ್ಯ ಏನಿಲ್ಲವೆಂದರೂ ೩೦ ಸಾವಿರ ಕ್ವಿಂಟಲ್‌ಗೂ ಹೆಚ್ಚು ಭತ್ತ ಆವಕವಾಗುತ್ತಿದೆ. ಪ್ರತಿ ವರ್ಷ ಸೋನಾ ಮಸೂರಿ, ಆರ್‌ಎನ್ ಆರ್ ತಳಿಯ ಭತ್ತದ ಬೆಲೆ ೧೪೦೦ರಿಂದ ೧೯೦೦ ರೂ.ವರೆಗೆ ಸಿಗುತ್ತಿತ್ತು.
ಈ ಬಾರಿ ಭತ್ತದ ಬೆಲೆ ೨೨೧೯ ರೂ. ಗಡಿ ತಲುಪಿತ್ತು. ಈಗಲೂ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಕನಿಷ್ಠ ದರ ೨ ಸಾವಿರ ನಿಗದಿಯಾಗಿದ್ದರೆ, ಗರಿಷ್ಠ ದರ ೨೨೧೯ ರೂ. ನಿಗದಿಯಾಗಿದೆ. ಮಾದರಿ ದರ ೨೦೫೦ ರೂ. ಸಿಗುತ್ತಿದೆ. ಬಹುತೇಕ ರೈತರು ಹೆಚ್ಚು ಕಡಿಮೆ ಕ್ವಿಂಟಲ್‌ಗೆ ೨೦೦೦-೨೨೦೦ ರೂ.ಗೆ ಭತ್ತ ಮಾರುತ್ತಿದ್ದಾರೆ.
ಅನ್ಯ ರಾಜ್ಯದಿಂದ ಲಗ್ಗೆ
ಅಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಸರ್ಕಾರ ಖರೀದಿಬ ಕೇಂದ್ರ ಪ್ರಾರಂಭ ಮಾಡಿ ಕ್ವಿಂಟಲ್‌ಗೆ ೨೮೦೦ ನಿಗದಿ ಮಾಡಲಾಗಿದ್ದರು, ರೈತರು ಮಾತ್ರ ಸರಿಯಾದ ಸಮಯಕ್ಕೆ ಹಣ ನೀಡುವುದಿಲ್ಲವೆಂದು ಜಿಲ್ಲೆಯ ಎಪಿಎಂಸಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರ ಜತೆಗೆ ಜಿಲ್ಲೆಯಲ್ಲಿ ರೈಸ್ ಮಿಲ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ಎಪಿಎಂಸಿಯಲ್ಲಿ ಉತ್ಪನ್ನ ಮಾರಾಟ ಮಾಡಿದ ದಿನವೇ ಹಣ ಸಂದಾಯ ಮಾಡುತ್ತಿದ್ದು, ನೆರೆ ರಾಜ್ಯದ ರೈತರು ಇತ್ತ ಮುಖ ಮಾಡಿದ್ದಾರೆ.
ತೆಲಂಗಾಣದ ಮೆಹಬೂಬ್‌ನಗರ, ಜಡಚರ್ಲ, ಮಕ್ತಾಲ್, ಗದ್ವಾಲ್, ಆಂಧ್ರದ ಕರ್ನೂಲ್,ಆದೋನಿ ಸೇರಿ ನಾನಾ ಭಾಗದಿಂದ ಭತ್ತ ಆವಕವಾಗುತ್ತಿದೆ. ಎಪಿಎಂಸಿ ಅಽಕಾರಿಗಳ ಮಾಹಿತಿ ಪ್ರಕಾರ ಶೇ.೯೦ರಷ್ಟು ಭತ್ತ ತೆಲಂಗಾಣದಿAದ ಬಂದರೆ, ಉಳಿದಿದ್ದು ಆಂಧ್ರದಿAದ ಬರುತ್ತಿದೆ.
ವರ್ತಕರ ಪರದಾಟ
ಅಂಧ್ರ ,ತೆಲಂಗಾಣ ಭಾಗದಲ್ಲಿ ಸರ್ಕಾರ ಖರೀದಿ ಕೇಂದ್ರ ಪ್ರಾರಂಭ ಮಾಡಿರುವುದರಿಂದ ಭತ್ತ ನಿರೀಕ್ಷಿತ ಮಟ್ಟದಲ್ಲಿ ಬರುವುದಿಲ್ಲ ವರ್ತಕರು, ರೈಸ್ ಮಿಲ್ ಮಾಲೀಕರು ಒಂದನೇ ಬೆಳೆ ವೇಳೆಯಲ್ಲೇ ಸಾವಿರಾರು ಕ್ವಿಂಟಲ್ ಭತ್ತ ಖರೀದಿಸಿ ಸಂಗ್ರಹಿಸಿದ್ದಾರೆ. ಆದರೆ ಈ ಬಾರಿ ಬೇಡಿಕೆಗಿಂತ ಹೆಚ್ಚು ಭತ್ತ ಆವಕವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗದೆ ಸ್ಥಿರಗೊಂಡಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ೭ ಸಾವಿರ ಗಡಿ ತಲುಪಬೇಕಿದ್ದ ಭತ್ತದ ದರ ಕೂಡ ೨ ಸಾವಿರಕ್ಕೆ ನಿಂತಿದೆ.
ಜಿಲ್ಲೆಯಲ್ಲಿ ಎಷ್ಟು ಭತ್ತ ಬಿತ್ತನೆ
ಈ ಬಾರಿ ಬೇಸಿಗೆಯಲ್ಲಿ ಕೃಷಿ ಇಲಾಖೆಯಿಂದ ಒಟ್ಟು ೯೫೮೬೪ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಪೈಕಿ ೧,೦೧,೧೫೦ ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ ಇತ್ತಿಚ್ಚಿಗೆ ಸುರಿದ ಆಕಾಲಿಕ ಮಳೆಯಿಂದ ಬೆಳೆಯಲ್ಲ ಹಾಳಗಿದ್ದರಿಂದ ಜಿಲ್ಲೆಯ ಭತ್ತ ಇನ್ನು ಮಾರುಕಟ್ಟೆಗೆ ಲಭ್ಯವಾಗಿಲ್ಲ.
ಕಳೆದ ೧೫ ದಿನಗಳಿಂದ ಈ ಬಾರಿ ನಿರೀಕ್ಷೆಗೆ ಮೀರಿ ಎಪಿಎಂಸಿ ನಿತ್ಯ ೩೦ ಸಾವಿರ ಕ್ವಿಂಟಲ್‌ಗೂ ಅಽಕ ಭತ್ತ ಆವಕವಾಗುತ್ತಿದೆ. ಏ.೨೯ ರಂದು ಒಂದೇ ದಿನ ೪೧ ಸಾವಿರ ಕ್ವಿಂಟಾಲ್ ಭತ್ತ ಆವಾಕ ವಾಗಿದೆ. ಇದರಿಂದ ಎಪಿಎಂಸಿಗೆ ಉತ್ತಮ ಆದಾಯ ಬಂದಿದೆ.
ಆದೇಪ್ಪಗೌಡ, ಕಾರ್ಯದರ್ಶಿ, ಎಪಿಎಂಸಿ ರಾಯಚೂರು