ಅಥಣಿ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ವತಿಯಿಂದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ರೈತ ಸಂಪರ್ಕ ಸಭೆ ಹಾಗೂ ಬೆಳೆಸಾಲ ಮೇಳ ಕಾರ್ಯಕ್ರಮ ಜರುಗಿತು.
ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ಆಚಾರ್ಯ ಮಾತನಾಡಿ, ಎಸ್‌ಬಿಐ ಬ್ಯಾಂಕ್ 1 ಎಕರೆ ಕಬ್ಬು ಬೆಳೆಗಾರರಿಗೆ 80ಸಾವಿರದಂತೆ ಹಾಗೂ ಎಥೆನಾಲ್ ಪ್ರಾಜೆಕ್ಟ್ ಮಾಡುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಕೋಲ್ಡ್ ಸ್ಟೋರೇಜ್‌ಗಾಗಿ ಶೇ. 35ರಿಂದ ಶೇ.60 ಸಬ್ಸಿಡಿ ಇರುತ್ತದೆ. ಸಣ್ಣ ಉದ್ಯಮಿದಾರಿಗೆ ಎಸ್ಸಿ/ಎಸ್ಟಿ ಹಾಗೂ ಮಹಿಳೆಯರಿಗೆ ಯಾವುದೇ ಸೆಕ್ಯೂರಿಟಿ ಇಲ್ಲದೆ 10ಸಾವಿರದಿಂದ 1ಕೋಟಿ ರೂ. ವರೆಗೆ ಸಾಲ ನೀಡಲಾಗುವುದು.
ಕೃಷಿ ಮುದ್ರಾದಲ್ಲಿ 10ಸಾವಿರ ರೂಪಾಯಿಂದ 10ಲಕ್ಷದ ರೂ.ವರೆಗೆ ಶಿಶು, ತರುಣ, ಕಿಶೋರ ಮಾದರಿಯಲ್ಲಿ ಸಾಲ ನೀಡಲಾಗುವುದು. ರೈತರು ಸಾಲ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರೈತರಿಗೆ ಕಬ್ಬು ಕಟಾವು ಮಾಡುವ ಮಷಿನ್ ಹಾಗೂ ಟ್ರ್ಯಾಕ್ಟರ್ ವಿತರಿಸಲಾಯಿತು. ಆರ್.ನಜೀಂ, ದಿಲೀಪ ಕಾಂಬಳೆ, ಸಂತೋಷ ಸುರ್ವೆ, ಸುರೇಶ ಕ್ಷಿರಸಾಗರ, ಬಾಬು ಗಲಗಲಿ, ಅಪ್ಪಾಸಾಬ ಗಸ್ತಿ, ಸಿದ್ದಪ್ಪ ಹಂಚಿನಾಳ ಇತರರಿದ್ದರು.